ವ್ಯಾಟಿಕನ್ ಸಿಟಿ: ಭಾರತ, ಮಂಗೋಲಿಯಾ ಸೇರಿ ವಿವಿಧ ದೇಶಗಳ 21 ಚರ್ಚ್‌ಗಳ ಹಿರಿಯ ಬಿಷಪ್‌ಗಳನ್ನು ಈ ಬೇಸಿಗೆಯಲ್ಲಿ ವ್ಯಾಟಿಕನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕಾರ್ಡಿನಲ್ ಹುದ್ದೆಗೆ ಏರಿಸಲಾಗುವುದು ಎಂದು ಪೋಪ್ ಫ್ರಾನ್ಸಿಸ್ ಭಾನುವಾರ ಹೇಳಿದ್ದಾರೆ.
ಫ್ರಾನ್ಸಿಸ್ ಅವರ ಸಂಕಲ್ಪಕ್ಕೆ ಅನುಗುಣವಾಗಿಕ್ಯಾಥೋಲಿಕ್ ಚರ್ಚ್ ಅನ್ನು ಜಾಗತಿಕವಾಗಿ ಪ್ರತಿನಿಧಿಸುವವರ ಆಯ್ಕೆಗೆ ಪ್ರತಿಷ್ಠಿತ ಕೆಂಪು ಟೋಪಿ ಸ್ವೀಕರಿಸಲುಭಾರತದ ಇಬ್ಬರು ಮತ್ತು ಮಂಗೋಲಿಯಾ, ಘಾನಾ, ನೈಜೀರಿಯಾ, ಸಿಂಗಪುರ, ಪೂರ್ವ ಟಿಮೋರ್, ಪೆರುಗ್ವೆ ಹಾಗೂ ಬ್ರೆಜಿಲ್‌ನಿಂದ ತಲಾ ಒಬ್ಬರು ಹಿರಿಯರ ಧರ್ಮಗುರುಗಳನ್ನು ಆಯ್ದ ಚರ್ಚ್‌ಗಳಿಂದ ಗುರುತಿಸಲಾಗಿದೆ.
ಫ್ರಾನ್ಸಿಸ್ ಅವರು ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಭಾನುವಾರದತಮ್ಮ ಸಾಂಪ್ರದಾಯಿಕ ಶುಭಾಶಯಗಳನ್ನುಸಾರ್ವಜನಿಕರಿಗೆ ತಿಳಿಸುವಾಗ ಕೊನೆಯಲ್ಲಿ ತಮ್ಮ ಈ ಆಯ್ಕೆಯನ್ನು ಪ್ರಕಟಿಸಿದರು. ಕನಿಷ್ಠ 16 ಹೊಸ ಕಾರ್ಡಿನಲ್‌ಗಳು 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. ಇವರು ಮುಂದಿನ ಧರ್ಮಗುರುಗಳ ಆಯ್ಕೆಗೆರಹಸ್ಯ ಸಮಾವೇಶದಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಪೋಪ್ ಹೇಳಿದರು.
ಆಗಸ್ಟ್ 27ರಂದು ಚರ್ಚ್‌ಗಳ ಹಿರಿಯ ಧರ್ಮಗುರುಗಳನ್ನು ಕಾರ್ಡಿನಲ್ ಪದವಿಗೆ ಏರಿಸುವ ಸಮಾರಂಭ ನಡೆಯಲಿದ್ದು, ಇದೇ ವೇಳೆ ಆಡಳಿತ ಮಂಡಳಿಯ ಸಭೆಯನ್ನೂ ನಡೆಸಲಾಗುವುದು ಎಂದು ಪೋಪ್ ಹೇಳಿದರು.
ಉಳಿದ ಹೊಸ ಕಾರ್ಡಿನಲ್‌ಗಳು ಫ್ರಾನ್ಸ್ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದವರು. ಆದರೆ, ಪ್ರಸ್ತುತ ವ್ಯಾಟಿಕನ್‌ನಲ್ಲಿಮೂವರು ಹಿರಿಯ ಬಿಷಪ್‌ಗಳು ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.