ಗಾಝಾ: ಬಿಸಿಗಾಳಿಯ ಸಮಸ್ಯೆಗೆ ತುತ್ತಾಗಿರುವ ಗಾಝಾದಲ್ಲಿ ಬೇಡಿಕೆಯ ಮಧ್ಯೆಯೇ ವಿದ್ಯುತ್ ಕಡಿತದಿಂದ ಐಸ್ ಕ್ರೀಮ್ ನೀರಾಗುತ್ತಿದೆ.
ಗಾಝಾದಲ್ಲಿ ಬೇಸಿಗೆಯ ಬಿಸಿ ಏರುತ್ತಿದೆ. ತಾಪಮಾನ 34 ಡಿಗ್ರಿ ಸೆ.ಗೆ ಏರಿಕೆಯಾಗಿದೆ. ಈ ಮಧ್ಯೆ ತಂಪು ಪಾನೀಯ ಮತ್ತು ಐಸ್ ಕ್ರೀಮ್‌ಗೆ ಬೇಡಿಕೆ ಹೆಚ್ಚಾಗಿದೆ.
ಆದರೆ, ಬಿಸಿಗಾಳಿಯ ಸಮಸ್ಯೆ ಮಧ್ಯೆ ದೀರ್ಘ ಅವಧಿಯ ವಿದ್ಯುತ್ ಕಡಿತದಿಂದಾಗಿ ಗೋದಾಮುಗಳಲ್ಲಿ ಸಮಸ್ಯೆಯಾಗಿದೆ. ಶೀತಲೀಕರಣ ಮತ್ತು ದಾಸ್ತಾನು ಘಟಕಗಳಲ್ಲಿನ ಐಸ್ ಕ್ರೀಮ್ ಮತ್ತು ಇತರ ಆಹಾರ ಪದಾರ್ಥಗಳು ಕರಗಿ ಹೋಗುತ್ತಿವೆ.
ವಿದ್ಯುತ್ ಸಮಸ್ಯೆಯ ಜತೆಗೆ ಬಿಸಿ ಗಾಳಿ ಇರುವುದರಿಂದ ಮಳಿಗೆಗಳಲ್ಲಿ ಕೂಡ ದಾಸ್ತಾನು ಇರಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಬೇಡಿಕೆ ಇದ್ದರೂ, ಜನರಿಗೆ ಐಸ್‌ಕ್ರೀಮ್ ಲಭ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.
ಗಾಝಾದಲ್ಲಿ ದಿನವೊಂದಕ್ಕೆ ಸಾಮಾನ್ಯವಾಗಿ 500 ಮೆಗಾವಾಟ್ಸ್ ವಿದ್ಯುತ್ ಅಗತ್ಯವಿದೆ. ಆದರೆ, ಪ್ರಸ್ತುತ 180 ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.