ಮಾರುಕೇಶ್ (ಮೊರೊಕ್ಕೊ): ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ 7.2ರಷ್ಟು ತೀವ್ರತೆಯ ಭೂಕಂಪದಲ್ಲಿ 1,305 ಮಂದಿ ಮೃತಪಟ್ಟು, 1,832 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 1,220 ಜನರ ಸ್ಥಿತಿ ಗಂಭೀರವಾಗಿದೆ
ದಕ್ಷಿಣ ಮಾರುಕೇಶ್ನಿಂದ 70 ಕಿ.ಮೀ ದೂರದಲ್ಲಿರುವ ಐಘಿಲ್ ನಗರದಲ್ಲಿ ಭೂಕಂಪನ ಕೇಂದ್ರ ಬಿಂದು ಇತ್ತು ಎಂದು ಇಲ್ಲಿನ ಒಳಾಡಳಿತ ಸಚಿವಾಲಯ ಶನಿವಾರ ತಿಳಿಸಿದೆ.
ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಅವಶೇಷಗಳಡಿ ಹಲವು ಜನರು ಸಿಲುಕಿಕೊಂಡಿದ್ದಾರೆ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.