ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 2024ರಲ್ಲಿ ಮತ್ತೆ ಸ್ಪರ್ಧಿಸುತ್ತೇನೆ: ಜೋ ಬೈಡನ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 16:04 IST
Last Updated 10 ಏಪ್ರಿಲ್ 2023, 16:04 IST
ಬೈಡನ್
ಬೈಡನ್   

ವಾಷಿಂಗ್ಟನ್ (ರಾಯಟರ್ಸ್‌): 2024ರಲ್ಲಿ ಮತ್ತೆ ಸ್ಪರ್ಧಿಸಲು ಯೋಜಿಸಿದ್ದೇನೆ ಎಂದು ಅಧ್ಯಕ್ಷ ಜೋ ಬೈಡನ್ ಸೋಮವಾರ ಹೇಳಿದ್ದಾರೆ.

‘ಮತ್ತೆ ಸ್ಪರ್ಧಿಸಲು ಯೋಜಿಸಿದ್ದೇನೆ. ಆದರೆ, ಅದನ್ನು ಘೋಷಿಸಲು ಇನ್ನೂ ಸಿದ್ಧವಾಗಿಲ್ಲ’ ಎಂದು ಎನ್‌ಬಿಸಿಯ ಟುಡೇ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅವರು 2024 ರಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಲು ಉದ್ದೇಶಿಸಿದ್ದಾರೆ. ಆದರೆ, ಔಪಚಾರಿಕ ಘೋಷಣೆ ಇನ್ನೂ ಮಾಡಿಲ್ಲ.

ADVERTISEMENT

ಇಬ್ಬರೂ ಒಟ್ಟಿಗೆ ಸ್ಪರ್ಧಿಸುವುದಾಗಿ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.