ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಆಡಳಿತದ ಎರಡು ಮುಖ್ಯ ವೈದ್ಯಕೀಯ ವಿಭಾಗಗಳಿಗೆ ಭಾರತೀಯ ಮೂಲದ ವೈದ್ಯರನ್ನು ನೇಮಕ ಮಾಡಿದ್ದಾರೆ.
ಪಶ್ಚಿಮ ವರ್ಜೀನಿಯಾದ ಮಾಜಿ ಆರೋಗ್ಯ ಆಯುಕ್ತ ಡಾ.ರಾಹುಲ್ ಗುಪ್ತಾ ಅವರನ್ನು ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ಕಚೇರಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಜನಪ್ರಿಯ ಲೇಖಕ ಮತ್ತು ಶಸ್ತ್ರಚಿಕಿತ್ಸಕ ಅತುಲ್ ಗವಾಂಡೆ ಅವರನ್ನು ಜಾಗತಿಕ ಆರೋಗ್ಯ ಬ್ಯೂರೊದ ಸಹಾಯಕ ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.
25 ವರ್ಷಗಳಿಂದ ಪ್ರಾಥಮಿಕ ಆರೈಕೆ ವಿಭಾಗದಲ್ಲಿ ವೈದ್ಯರಾಗಿರುವ ಗುಪ್ತಾ ಅವರು ಈ ಹಿಂದೆ ಪಶ್ಚಿಮ ವರ್ಜೀನಿಯಾದಲ್ಲಿ ಇಬ್ಬರು ಗವರ್ನರ್‌ಗಳಿಗೆ ಆರೋಗ್ಯ ಆಯುಕ್ತರಾಗಿ ಕೆಲಸ ಮಾಡಿದ್ದರು. ಝೀಕಾ ವೈರಸ್ ನಿರ್ವಹಣೆಯ ಕ್ರಿಯಾ ಯೋಜನೆ ಅಭಿವೃದ್ಧಿ ಮತ್ತು ಎಬೊಲಾ ವೈರಸ್ ರೋಗ ತಡೆಗೆ ಸಿದ್ಧತೆ ನಡೆಸುವ ತಂಡವನ್ನು ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.