ADVERTISEMENT

ಜಮೈಕಾದಲ್ಲಿ ಅಂಬೇಡ್ಕರ್‌ ಬೀದಿ, ಸ್ಮಾರಕ ಉದ್ಘಾಟಿಸಿದ ರಾಮನಾಥ್‌ ಕೋವಿಂದ್‌

ಪಿಟಿಐ
Published 17 ಮೇ 2022, 13:04 IST
Last Updated 17 ಮೇ 2022, 13:04 IST
ಜಮೈಕಾದ ರಾಜಧಾನಿ ಕಿಂಗ್‌ಸ್ಟನ್‌ನಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರು ನಾಮಕರಣ ಮಾಡಿರುವ ಬೀದಿಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಉದ್ಘಾಟಿಸಿದರು.
ಜಮೈಕಾದ ರಾಜಧಾನಿ ಕಿಂಗ್‌ಸ್ಟನ್‌ನಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರು ನಾಮಕರಣ ಮಾಡಿರುವ ಬೀದಿಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಉದ್ಘಾಟಿಸಿದರು.   

ಕಿಂಗ್‌ಸ್ಟನ್‌: ಜಮೈಕಾದ ರಾಜಧಾನಿ ಕಿಂಗ್‌ಸ್ಟನ್‌ನಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರು ನಾಮಕರಣ ಮಾಡಿರುವ ಬೀದಿ ಮತ್ತು ಅವರ ಜೀವನ ಸಾಧನೆ ತಿಳಿಸುವ ಸ್ಮಾರಕವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉದ್ಘಾಟಿಸಿದರು.

ಹೊಸದಾಗಿ ಉದ್ಘಾಟನೆಗೊಂಡಿರುವ ಅಂಬೇಡ್ಕರ್‌ ಅವೆನ್ಯೂ ಕಿಂಗ್‌ಸ್ಟನ್‌ ಟವರ್‌ ಸ್ಟ್ರೀಟ್‌ನ ಭಾಗವಾಗಿದೆ. ಅಂಬೇಡ್ಕರ್‌ ಸ್ಮಾರಕವನ್ನು ಸಚಿವ ಡೆಸ್ಮಂಡ್‌ ಮೆಕೆಂಜಿ ಮತ್ತು ರಾಮನಾಥ ಕೋವಿಂದ್‌ ಅವರು ಅನಾವರಣಗೊಳಿಸಿದರು ಎಂದು ಜಮೈಕಾ ಮಾಹಿತಿ ಸೇವೆ ವಿಭಾಗವು ತಿಳಿಸಿದೆ.

ಈ ವೇಳೆ ಮಾತನಾಡಿದ ರಾಮನಾಥ ಕೋವಿಂದ್‌, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ಮೂಲಕ ಶೋಷಿತ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಪ್ರಗತಿಪರ ಚಿಂತನೆಗಳನ್ನು ನೀಡಿದ್ದಾರೆ. ಜನರನ್ನು ಶಿಕ್ಷಿತರನ್ನಾಗಿ ಮಾಡುವ ಮೂಲಕ ಅಸಮಾನತೆ ನಿರ್ಮೂಲನೆಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.

ADVERTISEMENT

ರಾಮನಾಥ್‌ ಕೋವಿಂದ್‌ ಅವರ ಪತ್ನಿ ಸವಿತಾ ಕೋವಿಂದ್‌ ಅವರು ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.