ADVERTISEMENT

ಉತ್ತರ ಕೊರಿಯಾದ ನಾಯಕ ಕಿಮ್‌ಗೆ ಆರೋಸ್ ಲಿಮೊಸಿನ್ ಉಡುಗೊರೆಯಾಗಿ ನೀಡಿದ ಪುಟಿನ್

ಪಿಟಿಐ
Published 19 ಜೂನ್ 2024, 14:26 IST
Last Updated 19 ಜೂನ್ 2024, 14:26 IST
<div class="paragraphs"><p>ಕಿಮ್‌ ಜಾಂಗ್ ಉನ್ ಅವರಿಗೆ ಅರೊಸ್ ಲಿಮೊಸಿನ್ ಅನ್ನು ಉಡುಗೊರೆಯಾಗಿ ನೀಡಿದ ನಂತರ ಸ್ವತಃ ಚಾಲನೆ ಮಾಡಿ ಕಾರಿನಲ್ಲಿ ಕರದೊಯ್ದ ವ್ಲಾಡಿಮಿರ್ ಪುಟಿನ್</p></div>

ಕಿಮ್‌ ಜಾಂಗ್ ಉನ್ ಅವರಿಗೆ ಅರೊಸ್ ಲಿಮೊಸಿನ್ ಅನ್ನು ಉಡುಗೊರೆಯಾಗಿ ನೀಡಿದ ನಂತರ ಸ್ವತಃ ಚಾಲನೆ ಮಾಡಿ ಕಾರಿನಲ್ಲಿ ಕರದೊಯ್ದ ವ್ಲಾಡಿಮಿರ್ ಪುಟಿನ್

   

ರಾಯಿಟರ್ಸ್ ಚಿತ್ರ

ಮಾಸ್ಕೊ: ಉಭಯ ರಾಷ್ಟ್ರಗಳ ಕಾರ್ಯತಂತ್ರಗಳಲ್ಲಿ ಪ್ರಗತಿ ಸಾಧಿಸಿದ ಸಂಕೇತವಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಅವರಿಗೆ ವಿಲಾಸಿ ಆರೊಸ್‌ ಲಿಮೊಸಿನ್ ಅನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಡುಗೊರೆಯಾಗಿ ಬುಧವಾರ ನೀಡಿದ್ದಾರೆ.

ADVERTISEMENT

ಬರೋಬ್ಬರಿ 24 ವರ್ಷಗಳ ನಂತರ ಇತ್ತೀಚೆಗೆ ಉತ್ತರ ಕೊರಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್ ಅವರು ಈ ಉಡೊಗೊರೆ ನೀಡಿದ್ದಾರೆ.

ಎರಡೂ ದೇಶಗಳ ಮೇಲೆ ವೈರಿಗಳು ದಾಳಿ ನಡೆಸಿದರೆ ಪರಸ್ಪರ ಸಹಕಾರ ನೀಡುವ ವಾಗ್ದಾನವನ್ನು ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಾಯಕರು ಮಾಡಿದರು ಎಂದು ವರದಿಯಾಗಿದೆ.

ಈ ಸಂದರ್ಭದಲ್ಲಿ ಪುಟಿನ್ ಹಾಗೂ ಕಿಮ್‌ ಅವರು ಪರಸ್ಪರ ಉಡುಗೊರೆಯನ್ನು ನೀಡಿದರು. ಪುಟಿನ್ ಅವರು 2ನೇ ಬಾರಿ ಕಿಮ್‌ ಅವರಿಗೆ ಕಾರು ನೀಡಿದರು. ಪುಟಿನ್‌ಗೆ ಚಹಾ ಲೋಟದ ಸೆಟ್‌ಗಳನ್ನು ಕಿಮ್‌ ಉಡುಗೊರೆಯಾಗಿ ನೀಡಿದ್ದಾರೆ.  

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿಮ್ ಅವರಿಗೆ ಪುಟಿನ್ ಆರೊಸ್‌‌ ಮೋಟಾರ್ಸ್‌ನ ವಿಲಾಸಿ ಕಾರಿನ ಕುರಿತು ಮಾಹಿತಿ ನೀಡಿದ್ದರು. 2024ರ ಫೆಬ್ರುವರಿಯಲ್ಲಿ ಈ ಕಾರನ್ನು ಪುಟಿನ್ ಉಡೊಗೊರೆಯಾಗಿ ನೀಡಿದ್ದರು. ಆ ಮೂಲಕ ಉಡುಗೊರೆಯಾಗಿ ಆರೊಸ್‌ ಕಾರನ್ನು ಸ್ವೀಕರಿಸಿದ ಮೊದಲ ಗಣ್ಯ ವ್ಯಕ್ತಿ ಕಿಮ್ ಆಗಿದ್ದಾರೆ.

ಮೇನಲ್ಲಿ ಬಹರೈನ್‌ ದೊರೆ ಹಮಾದ್ ಬಿನ್ ಇಸಾ ಅಲ್ ಖಲೀಫಾ ಅವರಿಗೆ ಆರೊಸ್‌ ಕಂಪನಿಯ ಉದ್ದನೆಯ ಮಾದರಿಯ ಕಾರನ್ನು ಪುಟಿನ್ ನೀಡಿದ್ದರು.

ಆರೊಸ್‌ ಕಾರು ರಷ್ಯಾದ ವಿಲಾಸಿ ಕಾರು ತಯಾರಿಕಾ ಕಂಪನಿಯಾಗಿದೆ. ಕೈಗಾರಿಕಾ ಸಚಿವಾಲಯದೊಂದಿಗಿನ ಒಡಂಬಡಿಕೆ ಮಾಡಿಕೊಂಡು 2013ರಲ್ಲಿ ಈ ಕಂಪನಿ ಕಾರ್ಯಾರಂಭ ಮಾಡಿತು. ಇದಾದ ನಂತರ ಸರ್ಕಾರದಲ್ಲಿ ಬಳಸಲಾಗುತ್ತಿರುವ ಎಲ್ಲಾ ಕಾರುಗಳೂ ಅರೊಸ್ ಕಂಪನಿಯದ್ದೇ ಆಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.