ಕೊಲಂಬೊ: ಸಂಘರ್ಷ ಪೀಡಿತ ದೇಶದ ಉತ್ತರ ಭಾಗದ ಅಭಿವೃದ್ಧಿಗೆ ತಮಿಳರು ಸಹಕಾರ ನೀಡಬೇಕು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಶನಿವಾರ ಹೇಳಿದರು.
ಜಾಫ್ನಾದಲ್ಲಿ ನಡೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಧಿಕಾರ ವಿಕೇಂದ್ರೀಕರಣಕ್ಕೆ ನಮ್ಮ ಸರ್ಕಾರ ಬದ್ಧವಿದೆ. ಅಲ್ಪಸಂಖ್ಯಾತ ತಮಿಳರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಇದಕ್ಕಾಗಿ, ಭಾರತ ಪ್ರಾಯೋಜಕತ್ವದಲ್ಲಿ ಸಂವಿಧಾನಕ್ಕೆ ತರಲಾಗಿರುವ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ’ ಎಂದರು.
‘ದೇಶದ ಪೂರ್ವಭಾಗದಲ್ಲಿರುವ ಟ್ರಿಂಕಾಮಲೈ ಬಂದರು ಅಭಿವೃದ್ಧಿಗೆ ಭಾರತ ನೆರವು ನೀಡುವ ವಿಶ್ವಾಸ ಇದೆ’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.