ADVERTISEMENT

ಪಾಕಿಸ್ತಾನ: ಅಧ್ಯಕ್ಷರ ಮಗಳು ಆಸೀಫಾ ಭುಟ್ಟೊಗೆ ‘ಪ್ರಥಮ ಮಹಿಳೆ’ ಪಟ್ಟ

ಪಿಟಿಐ
Published 11 ಮಾರ್ಚ್ 2024, 15:16 IST
Last Updated 11 ಮಾರ್ಚ್ 2024, 15:16 IST
<div class="paragraphs"><p>ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಮಗಳು ಆಸೀಫಾ ಭುಟ್ಟೋ&nbsp; </p></div>

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಮಗಳು ಆಸೀಫಾ ಭುಟ್ಟೋ 

   

ಪಿಟಿಐ ಚಿತ್ರ

ಇಸ್ಲಾಮಾಬಾದ್: ಚಾರಿತ್ರಿಕ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಜರ್ದಾರಿ ಅವರು ತಮ್ಮ 31 ವರ್ಷದ ಮಗಳು ಆಸೀಫಾ ಭುಟ್ಟೊ ಅವರನ್ನು ರಾಷ್ಟ್ರದ ಪ್ರಥಮ ಮಹಿಳೆಯನ್ನಾಗಿ ಘೋಷಿಸಲಾಗಿದೆ.

ADVERTISEMENT

ರಾಷ್ಟ್ರದ ಅಧ್ಯಕ್ಷರ ಪತ್ನಿಗೆ ಪ್ರಥಮ ಮಹಿಳೆಯ ಸ್ಥಾನಮಾನ ನೀಡುವುದು ವಾಡಿಕೆ. ಆದರೆ, ಜರ್ದಾರಿ ಅವರ ಪತ್ನಿ ಬೆನಜಿರ್ ಭುಟ್ಟೊ ಅವರನ್ನು 2007ರಲ್ಲಿ ಹತ್ಯೆ ಮಾಡಲಾಗಿತ್ತು. ನಂತರ ಜರ್ದಾರಿ ಅವರು ವಿಧುರನಾದರು. ಅವರು ಮರುವಿವಾಹವಾಗಲಿಲ್ಲ. ರಾಷ್ಟ್ರಾಧ್ಯಕ್ಷರಾಗಿದ್ದ 2008ರಿಂದ 2013ರವರೆಗಿನ ಪ್ರಥಮ ಅವಧಿಯಲ್ಲೂ ದೇಶದ ಪ್ರಥಮ ಮಹಿಳೆಯ ಸ್ಥಾನ ಖಾಲಿ ಉಳಿದಿತ್ತು.

ಆಸೀಫಾ ಅವರನ್ನು ರಾಷ್ಟ್ರದ ಪ್ರಥಮ ಮಹಿಳೆ ಸ್ಥಾನಕ್ಕೆ ಆಯ್ದೆ ಮಾಡಿರುವುದು ಪಾಕಿಸ್ತಾನದ ರಾಜಕೀಯ ಚರಿತ್ರೆಯಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ.

ವಿಧುರನಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ದೇಶದ ಪ್ರಥಮ ಮಹಿಳೆಯಾಗಿ ಕಾರ್ಯನಿರ್ವಹಿಸುವಂತೆ ತಮ್ಮ ಸೊಸೆ ಎಮಿಲಿ ಡೊನೆಲ್ಸನ್ ಅವರನ್ನು  ಕೇಳಿಕೊಂಡಿದ್ದರು. ಅಮೆರಿಕದ ಮತ್ತಿಬ್ಬರು ರಾಷ್ಟ್ರಾಧ್ಯಕ್ಷರಾದ ಚೆಸ್ಟರ್ ಆರ್ಥರ್ ಮತ್ತು ಗ್ರೋವರ್ ಕ್ಲೀವ್‌ಲ್ಯಾಂಡ್ ರಾಷ್ಟ್ರದ ಪ್ರಥಮ ಮಹಿಳೆಯಾಗುವಂತೆ ತಮ್ಮ ಸಹೋದರಿಯರನ್ನು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.