ADVERTISEMENT

ಚಂದ್ರನ ಅಂಗಳ ತಲುಪಿದ ಖಾಸಗಿ ಬಾಹ್ಯಾಕಾಶ ನೌಕೆ

ಪಿಟಿಐ
Published 23 ಫೆಬ್ರುವರಿ 2024, 14:22 IST
Last Updated 23 ಫೆಬ್ರುವರಿ 2024, 14:22 IST
ಬಾಹ್ಯಾಕಾಶ ನೌಕೆ
ಬಾಹ್ಯಾಕಾಶ ನೌಕೆ   ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಅಮೆರಿಕದ ಖಾಸಗಿ ಕಂಪನಿಯೊಂದು ಚಂದ್ರನ ಅಂಗಳದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನೌಕೆಯನ್ನು ನೆಲೆಯೂರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಕಳೆದ 50 ವರ್ಷಗಳ ಇತಿಹಾಸದಲ್ಲಿ ಚಂದ್ರನ ಅಂಗಳವನ್ನು ತಲುಪಿಸಿದ ಅಮೆರಿಕದ ಮೊದಲ ಬಾಹ್ಯಾಕಾಶ ನೌಕೆಯೂ ಇದಾಗಿದೆ.

ಈ ಮೊದಲು ಭಾರತ, ರಷ್ಯಾ ಮತ್ತು ಅಮೆರಿಕ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು. ಈ ಹಿಂದೆ ಅಮೆರಿಕದ ‘ಅಪೊಲೊ 17’ ಬಾಹ್ಯಾಕಾಶ ನೌಕೆಯು 1972ರಲ್ಲಿ ಚಂದ್ರನ ಅಂಗಳವನ್ನು ತಲುಪಿತ್ತು. 

ADVERTISEMENT

ಅಮೆರಿಕ ಖಾಸಗಿ ಸಂಸ್ಥೆ ಇನುಷಿಟಿವ್ ಮಷಿನ್ಸ್‌ ನಿರ್ಮಿಸಿರುವ ‘ಒಡಿಸ್ಸಿಯಸ್’ ಎಂದು ಹೆಸರಿಸಲಾಗಿರುವ ಲ್ಯಾಂಡರ್ ಅಮೆರಿಕದ ಸ್ಥಳೀಯ ಕಾಲಮಾನ ಗುರುವಾರ, ಸಂಜೆ 6.30ಕ್ಕೆ ಚಂದ್ರನ ಅಂಗಳವನ್ನು ತಲುಪಿತು. ದಕ್ಷಿಣ ಧ್ರುವದ ಬಳಿಯೇ ಈ ಲ್ಯಾಂಡರ್‌ ಅನ್ನು ಇಳಿಸಲಾಗಿದೆ ಎಂದು ವರದಿ ತಿಳಿಸಿದೆ.

‘ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಚಂದ್ರನಲ್ಲಿಗೆ ಮರಳಿದೆ’ ಎಂದು ‘ನಾಸಾ’ದ ಆಡಳಿತಾಧಿಕಾರಿ ಬಿಲ್ ನೆಲ್ಸನ್‌ ಈ ಕುರಿತು ಪ್ರತಿಕ್ರಿಯಿಸಿದರು. 

ವಾಲ್‌ ಸ್ಟ್ರೀಟ್‌ ಜರ್ನಲ್‌ ಪ್ರಕಾರ, ಲ್ಯಾಂಡರ್ ‘ಒಡಿಸ್ಸಿಯಸ್‌’ ನಾಸಾದ ಸಂಶೋಧನಾ ಪರಿಕರಗಳನ್ನು ಹೊತ್ತೊಯ್ದಿದೆ. ಜೊತೆಗೆ ಕಲಾವಿದ ಜೆಫ್ ಕೂನ್ಸ್‌ ರೂಪಿಸಿರುವ ಕಾಷ್ಠಶಿಲ್ಪವನ್ನು ಒಯ್ದಿದೆ ಎಂದರು. ಚಂದ್ರನ ಅಂಗಳದಲ್ಲಿ ಈ ಲ್ಯಾಂಡರ್‌ ಒಂದು ವಾರದ ನಂತರ ಕಾರ್ಯಾರಂಭ ಮಾಡಬಹುದು ಎಂದು ಆಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.