ವಾಷಿಂಗ್ಟನ್, ಡಿಸಿ(ಅಮೆರಿಕಾ): ಇಸ್ರೇಲ್- ಹಮಾಸ್ ಕದನ ವಿರಾಮಕ್ಕೆ ಕರೆ ನೀಡಲು ಪ್ಯಾಲೆಸ್ಟೀನ್ ಪರ ಪ್ರತಿಭಟನಾಕಾರರು ಶನಿವಾರ ಲಂಡನ್, ಬರ್ಲಿನ್ ಮತ್ತು ರೋಮ್‌ನಲ್ಲಿ ಮೆರವಣಿಗೆ ನಡೆಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ.
ಕನಿಷ್ಠ 7 ಸಾವಿರ ಮಂದಿ ಪ್ರತಿಭಟನಾಕಾರರು ಪ್ಯಾಲೆಸ್ಟೀನ್ ಪರ ಶನಿವಾರ ನ್ಯೂಯಾರ್ಕ್‌ನಲ್ಲಿರುವ ಬ್ರೂಕ್ಲಿನ್ ಸೇತುವೆಯ ಮೇಲೆ ಮೆರವಣಿಗೆ ನಡೆಸಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಬ್ಯಾನರ್, ಪ್ಯಾಲೆಸ್ಟೀನ್ ಧ್ವಜ ಮತ್ತು ಫಲಕಗಳನ್ನು ಹಿಡಿದ ಪ್ರತಿಭಟನಾಕಾರರು 'ಮಕ್ಕಳ ಹತ್ಯೆ ನಿಲ್ಲಿಸಿ', 'ಪ್ಯಾಲೆಸ್ಟೀನ್‌ಗೆ ಸ್ವಾತಂತ್ರ್ಯ' ಮತ್ತು 'ಗಾಜಾದ ಮೇಲೆ ಬಾಂಬ್ ದಾಳಿ ನಿಲ್ಲಿಸಿ' ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.