ADVERTISEMENT

ಮಾನವ ಕಳ್ಳಸಾಗಣೆ: ಪಾಕಿಸ್ತಾನದಲ್ಲಿ ಮಾನವ ಹಕ್ಕು ಹೋರಾಟಗಾರ ಸೆರೆ

ಪಿಟಿಐ
Published 5 ಜೂನ್ 2024, 11:41 IST
Last Updated 5 ಜೂನ್ 2024, 11:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ಮಾನವ ಕಳ್ಳಸಾಗಣೆ ಆರೋಪ ಪ್ರಕರಣದ ಸಂಬಂಧ ಪಾಕಿಸ್ತಾನ ಮೂಲದ ಮಾನವ ಹಕ್ಕುಗಳ ಹೋರಾಟಗಾರ ಸರೀಮ್ ಬರ್ನಿ ಅವರನ್ನು ಬುಧವಾರ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

25ಕ್ಕೂ ಹೆಚ್ಚು ಮಕ್ಕಳನ್ನು ಕಳ್ಳಸಾಗಣೆ ಮಾಡಿದ ಹಾಗೂ ಅಮೆರಿಕದಲ್ಲಿ ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಅಮೆರಿಕ ಸರ್ಕಾರ ಮಾಹಿತಿ ನೀಡಿತ್ತು. ಹೀಗಾಗಿ ಬರ್ನಿ ಅಮೆರಿಕದಿಂದ ಕರಾಚಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಾನವ ಕಳ್ಳಸಾಗಣೆ ಕುರಿತು ತನಿಖೆ ನಡೆಸುವ ತನಿಖಾ ಸಂಸ್ಥೆಯು (ಎಫ್ಐಎ) ಬಂಧಿಸಿದೆ ಎಂದು ವರದಿಯಾಗಿದೆ. 

ಶೋಷಿತ ಮಕ್ಕಳ ಪರ ಕಾರ್ಯ ನಿರ್ವಹಿಸುವ ವೆಲ್ಫ್‌ಫೇರ್ ಟ್ರಸ್ಟ್ ಇಂಟರ್‌ನ್ಯಾಷನಲ್ ಎನ್ನುವ ಟ್ರಸ್ಟ್‌ನ ನೇತೃತ್ವವನ್ನು ಸರೀಮ್ ಬರ್ನಿ ವಹಿಸಿದ್ದಾರೆ. ಈ ಟ್ರಸ್ಟ್ ಕಿರುಕುಳ, ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ, ಮನೆಯಲ್ಲಿ ನಡೆಯುವ ಹಿಂಸಾಚಾರ, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಇನ್ನಿತರ ಘಟನೆಗಳಲ್ಲಿ ದೌರ್ಜನ್ಯಕ್ಕೊಳಗಾಗುವ ಮಕ್ಕಳಿಗೆ ಕಾನೂನು ನೆರವು ನೀಡುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.