ADVERTISEMENT

ಲಿಬಿಯಾ ಆಡಳಿತದ ವಿರುದ್ಧ ಬಂಡೆದ್ದ ಪ್ರತಿಭಟನಾಕಾರರು: ಸಂಸತ್ ಭವನಕ್ಕೆ ಬೆಂಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2022, 6:41 IST
Last Updated 3 ಜುಲೈ 2022, 6:41 IST
   

ಟ್ರಿಪೋಲಿ: ಸರ್ಕಾರದ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು ‌ಪೂರ್ವ ಲಿಬಿಯಾದ ಟೊಬ್ರೂಕ್‌ನಲ್ಲಿರುವ ಸಂಸತ್‌ ಭವನಕ್ಕೆ ಬೆಂಕಿ ಹಚ್ಚಿದ್ದಾರೆ.

ಸರ್ಕಾರವನ್ನು ಈ ಕೂಡಲೇ ವಿಸರ್ಜಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸಂಸತ್‌ ಭವನದ ಕಡೆಗೆ ಮೆರವಣಿಗೆ ಹೊರಟಿದ್ದ ಪ್ರತಿಭಟನಾಕಾರರನ್ನು ತಡೆಯಲಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾಕಾರರು ಸಂಸತ್‌ ಭವನಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.

ಟ್ರಿಪೋಲಿ, ಟೊಬ್ರೂಕ್‌ ಸೇರಿದಂತೆ ಲಿಬಿಯಾದ ಇತರ ನಗರಗಳಲ್ಲಿ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಲಾಗಿದೆ.

ADVERTISEMENT

ಸಂಸತ್ತಿನ ಕಟ್ಟಡ ಮೇಲೆ ದಾಳಿ ಮಾಡಿರುವುದನ್ನು ವಿಶ್ವಸಂಸ್ಥೆ ಖಂಡಿಸಿದೆ.

‘ಶಾಂತಿಯುತವಾಗಿ ಪ್ರತಿಭಟಿಸುವ ಜನರ ಹಕ್ಕನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು. ಆದರೆ, ಗಲಭೆಗಳು ಮತ್ತು ವಿಧ್ವಂಸಕ ಕೃತ್ಯಗಳು ಸ್ವೀಕಾರಾರ್ಹವಲ್ಲ’ ಎಂದು ವಿಶ್ವಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.