ADVERTISEMENT

ಪ್ಯಾಲೆಸ್ಟೀನ್‌ ಸ್ವತಂತ್ರ ದೇಶವನ್ನಾಗಿ ಘೋಷಿಸುವುದೇ ಸಮಸ್ಯೆಗೆ ಪರಿಹಾರ: ಪುಟಿನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2023, 2:25 IST
Last Updated 14 ಅಕ್ಟೋಬರ್ 2023, 2:25 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ಇಸ್ರೇಲ್‌ ಮೇಲೆ ಹಮಾಸ್ ಬಂಡುಕೋರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್, ಪ್ಯಾಲೆಸ್ಟೀನ್‌ ಅನ್ನು ಸ್ವತಂತ್ರ ದೇಶವನ್ನಾಗಿ ಘೋಷಣೆ ಮಾಡಿ ಪೂರ್ವ ಜೆರುಸಲೇಂವನ್ನು ಅದರ ರಾಜಧಾನಿಯಾಗಿ ಮಾಡುವ ಮೂಲಕ ಇಸ್ರೇಲ್‌–ಪ್ಯಾಲೆಸ್ಟೀನ್‌ ನಡುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ ಎಂದು ಟಿಎಎಸ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ಶೃಂಗಸಭೆಯಲ್ಲಿ ಮಾತನಾಡಿದ ಅವರು ಪ್ಯಾಲೇಸ್ಟಿನ್‌-ಇಸ್ರೇಲ್‌ ಸಂಘರ್ಷ ಕೊನೆಗೊಳಿಸಲು ಸಂಧಾನ ಒಂದೇ ಪರಿಹಾರ ಎಂದು ತಿಳಿಸಿದ್ದಾರೆ.

‘ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ಮಾಡಿದ ದಾಳಿ ಖಂಡನೀಯ. ಬಂಡುಕೋರರಿಂದ ತನ್ನ ದೇಶವನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗೆ ಇದೆ. ಹಾಗೆಯೇ ಶಾಂತಿ ಕಾಪಾಡುವ ಹಕ್ಕು ಕೂಡ ಇದೆ. ವಿಶ್ವಸಂಸ್ಥೆಯ ದ್ವಿರಾಜ್ಯ ಸೂತ್ರದಂತೆ ಸಂಧಾನ ಮಾತುಕತೆ ನಡೆಸಬೇಕು. ಇಸ್ರೇಲ್‌ನ ಶಾಂತಿ–ಭದ್ರತೆ ಕಾಪಾಡುವುದರ ಜೊತೆಗೆ ಪ್ಯಾಲೆಸ್ಟೀನ್‌ ಸ್ವತಂತ್ರ ದೇಶವನ್ನಾಗಿ ರಚಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ಇಂತಹ ಪರಿಸ್ಥಿತಿಯಲ್ಲಿ ಎರಡು ಸ್ವತಂತ್ರ ದೇಶವನ್ನಾಗಿ ಮಾಡದ ಹೊರತು ಬೇರಾವ ಪರಿಹಾರವಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.