ಮಾಸ್ಕೊ: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಕುರಿತು ಸೋಚಿಯ ಬ್ಲ್ಯಾಕ್ ಸೀ ರೆಸಾರ್ಟ್‌ನಲ್ಲಿ ಮೊದಲ ಬಾರಿ ಸಾರ್ವಜನಿಕ ಪ್ರತಿಕ್ರಿಯೆ ನೀಡಿರುವ ಪುಟಿನ್, 'ಕೊಲೆ ಯತ್ನ ವೇಳೆ ಟ್ರಂಪ್ ಅವರು ತೋರಿದ ಧೈರ್ಯವು ನನ್ನಲ್ಲಿ ಪ್ರಭಾವ ಬೀರಿದೆ. ಅವರು ಧೈರ್ಯವಂತ ವ್ಯಕ್ತಿ' ಎಂದು ಹೊಗಳಿದ್ದಾರೆ.
ಟ್ರಂಪ್ ಅಧಿಕಾರದಲ್ಲಿ ಏನನ್ನು ನಿರೀಕ್ಷೆ ಮಾಡಬಹುದು ಎಂಬುದಕ್ಕೆ ಉತ್ತರಿಸಿದ ಅವರು 'ಈಗ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಯಾವುದೇ ಕಲ್ಪನೆಯಿಲ್ಲ' ಎಂದು ಹೇಳಿದ್ದಾರೆ.
'ಇದು ಟ್ರಂಪ್ ಪಾಲಿಗೆ ಅಧಿಕಾರದ ಕೊನೆಯ ಅವಧಿಯಾಗಿದೆ. ಅವರು ಏನು ಮಾಡಲಿದ್ದಾರೆ ಎಂಬುದು ಮುಖ್ಯವೆನಿಸುತ್ತದೆ' ಎಂದು ಹೇಳಿದ್ದಾರೆ.
ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಯತ್ನಿಸುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.