ಮಾಸ್ಕೊ/ಕೀವ್ (ಎಪಿ/ಎಎಫ್‌ಪಿ): ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಉಕ್ರೇನ್‌ನ ನಾಲ್ಕು ಪ್ರದೇಶಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಸೇನಾಡಳಿತ ಘೋಷಿಸಿದ್ದಾರೆ.
ರಷ್ಯಾ ಸೇರಿರುವ ಲುಹಾನ್‌ಸ್ಕ್, ಡೊನೆಟ್‌ಸ್ಕ್, ಕೆರ್ಸಾನ್, ಝಪೊರಿಝಿಯಾ ಪ್ರದೇಶಗಳ ಮುಖ್ಯಸ್ಥರಿಗೆಹೆಚ್ಚುವರಿ ತುರ್ತು ಅಧಿಕಾರವನ್ನು ಪುಟಿನ್ ನೀಡಿದ್ದಾರೆ.
ಉಕ್ರೇನ್‌ನಲ್ಲಿ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿರುವ ಪುಟಿನ್,ಸೇನಾ ಕಾರ್ಯಾಚರಣೆಗೆ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಂವಹನ ಹೆಚ್ಚಿಸುವ ಸಲುವಾಗಿ ಸಮನ್ವಯ ಸಮಿತಿ ಸ್ಥಾಪನೆಗೆ ಆದೇಶ ಹೊರಡಿಸಿದರು.
ಸೇನಾಡಳಿತದ ಕಾನೂನು ಜಾರಿಯಲ್ಲಿರುವಾಗ ಸಾರ್ವಜನಿಕರು ಒಟ್ಟುಗೂಡುವುದು ಮತ್ತು ಪ್ರಯಾಣ ಕೈಗೊಳ್ಳುವುದನ್ನು ನಿರ್ಬಂಧಿಸುತ್ತದೆ. ಅಲ್ಲದೇಬಿಗಿಯಾದ ಸೆನ್ಸಾರ್‌ಶಿಪ್ ಇರಲಿದೆ. ಕಾನೂನು ಜಾರಿ ಏಜೆನ್ಸಿಗಳಿಗೆ ಹೆಚ್ಚಿನ ಅಧಿಕಾರವೂ ಇರಲಿದೆ. ಪುಟಿನ್ ಅವರು ಇನ್ನಷ್ಟು ಮಾಹಿತಿ ನೀಡಿಲ್ಲ.
ನಾಗರಿಕರ ತೆರವು: ವಶಪಡಿಸಿಕೊಂಡಿರುವ ಉಕ್ರೇನ್‌ನ ಪ್ರಮುಖ ಪ್ರದೇಶಗಳಿಂದ ಸಾಮೂಹಿಕವಾಗಿ ನಾಗರಿಕರನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ರಷ್ಯಾ ಪಡೆಗಳು ಬುಧವಾರ ಆರಂಭಿಸಿವೆ.
ಉಕ್ರೇನಿನ ದಕ್ಷಿಣದ ನಗರಗಳ ಮೇಲೆ ಬುಧವಾರ ಕೂಡ ರಷ್ಯಾ ಸೇನೆ, ಕ್ಷಿಪಣಿ, ಶೆಲ್ ಹಾಗೂ ಆತ್ಮಾಹುತಿ ಡ್ರೋನ್ ದಾಳಿ ನಡೆಸಿದೆ. ಪ್ರಮುಖ ಮೂಲಸೌಕರ್ಯಗಳನ್ನೇ ಗುರಿಯಾಗಿಸಿ ನಡೆಸುತ್ತಿರುವ ವೈಮಾನಿಕ ದಾಳಿಗೆ ಎರಡು ನಗರಗಳು, ಹಲವು ಪಟ್ಟಣಗಳು ಮತ್ತು ಹಳ್ಳಿಗಳು ವಿದ್ಯುತ್ ಸಂಪರ್ಕ, ನೀರಿನ ಪೂರೈಕೆ ಕಳೆದುಕೊಂಡಿವೆ.ನಾಗರಿಕರು ಅಗತ್ಯ ಮೂಲಸೌಕರ್ಯಗಳಿಲ್ಲದೇಚಳಿಯಿಂದ ತತ್ತರಿಸಿ, ಸ್ವಯಂಪ್ರೇರಿತವಾಗಿ ಸ್ಥಳ ತೊರೆಯುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.