ADVERTISEMENT

ಕ್ವಾಡ್ ಶೃಂಗಸಭೆ; ಮೋದಿ– ಬೈಡನ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 17:32 IST
Last Updated 28 ಏಪ್ರಿಲ್ 2022, 17:32 IST

ವಾಷಿಂಗ್ಟನ್‌ (ಪಿಟಿಐ): ಜಪಾನ್‌ನ ಟೋಕಿಯೊದಲ್ಲಿ ಮುಂದಿನ ತಿಂಗಳು ನಡೆಯಲಿರುವ ಕ್ವಾಡ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನ ಹೇಳಿದೆ.

ಕ್ವಾಡ್‌ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೈಡನ್‌ ಅವರು ಮೇ 20ರಿಂದ 24ರವರೆಗೆ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸವು ಬೈಡನ್‌ ಮತ್ತು ಹ್ಯಾರಿಸ್ ಆಡಳಿತವುತೆರೆದ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ ಪ್ರತಿಪಾದನೆಗೆ ತೋರುತ್ತಿರುವ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ
ಎಂದುಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಬುಧವಾರ ಇಲ್ಲಿ ತಿಳಿಸಿದರು. ‘ಕ್ವಾಡ್‌ನಲ್ಲಿ ಅಮೆರಿಕದ ಜತೆಗೆ ಸದಸ್ಯ ರಾಷ್ಟ್ರಗಳಾಗಿರುವ ಭಾರತ, ಆಸ್ಟ್ರೇಲಿಯಾ, ಜಪಾನ್‌ ನಾಯಕರನ್ನೂ ಬೈಡನ್‌ ಭೇಟಿ ಮಾಡಲಿದ್ದಾರೆ’ ಎಂದು ಸಾಕಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT