ADVERTISEMENT

ರಾಣಿ ಪಾರ್ಥಿವ ಶರೀರ ಬುಧವಾರ ಲಂಡನ್‌ಗೆ: ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನ

ಪಿಟಿಐ
Published 13 ಸೆಪ್ಟೆಂಬರ್ 2022, 14:22 IST
Last Updated 13 ಸೆಪ್ಟೆಂಬರ್ 2022, 14:22 IST
ರಾಣಿ ಎಲಿಜಬೆತ್‌ ಅವರಿಗೆ ಪುಷ್ಪ ನಮನ
ರಾಣಿ ಎಲಿಜಬೆತ್‌ ಅವರಿಗೆ ಪುಷ್ಪ ನಮನ   

ಲಂಡನ್‌: ರಾಣಿ ಎರಡನೇ ಎಲಿಜಬೆತ್‌ ಅವರ ಶವಪೆಟ್ಟಿಗೆಯುಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಿಂದ ಲಂಡನ್‌ಗೆ ತೆರಳುವ ಮಾರ್ಗದಲ್ಲಿ ರಾಣಿಗೆ ಅಂತಿಮ ಗೌರವ ಸಲ್ಲಿಸಲು ಸಾವಿರಾರು ಜನರು ಈಗಾಗಲೇ ವೆಸ್ಟ್‌ಮಿನ್‌ಸ್ಟರ್‌ ಅರಮನೆ ಬಳಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಲಂಡನ್‌ನ ಬಕ್ಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್‌ಮಿನ್‌ಸ್ಟರ್‌ ಅರಮನೆಗೆ ಬುಧವಾರ ಮಧ್ಯಾಹ್ನ ಎಲಿಜಬೆತ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗುವುದು. ಬಳಿಕ ಬುಧವಾರ ಸಂಜೆ 6:30ರಿಂದ ಅಂತಿಮ ಸಂಸ್ಕಾರ ನಡೆಯುವ ದಿನವಾದ ಸೆಪ್ಟೆಂಬರ್‌ 19ರ ವರೆಗೆ ವೆಸ್ಟ್‌ಮಿನ್‌ಸ್ಟರ್‌ ಅರಮನೆಯ ಸಭಾಂಗಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.

ಸೋಮವಾರದಿಂದಲೇ ಜನರು ವೆಸ್ಟ್‌ಮಿನ್‌ಸ್ಟರ್‌ ಅರಮನೆ ಬಳಿ ಸೇರಲಾರಂಭಿಸಿದ್ದಾರೆ.ಸುಮಾರು 5 ಕಿ.ಮೀ ದೂರದವರೆಗೆ ಸರತಿ ಸಾಲು ರಚನೆ ಆಗಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.