ADVERTISEMENT

Queen Elizabeth II ಅಂತ್ಯಕ್ರಿಯೆ: ದಶಕದ ಹಿಂದೆಯೇ ಸಿದ್ಧವಾಗಿದ್ದ ಶವಪೆಟ್ಟಿಗೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 1:45 IST
Last Updated 20 ಸೆಪ್ಟೆಂಬರ್ 2022, 1:45 IST
   

ಲಂಡನ್‌ : ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರ ಇಡಲಾಗಿದ್ದ ಶವಪೆಟ್ಟಿಗೆಯನ್ನು, ರಾಜಮನೆತನದ ಸ್ಯಾಂಡ್ರಿಂಗ್‌ಹ್ಯಾಮ್‌ ಎಸ್ಟೇಟ್‌ನಲ್ಲಿ ಬೆಳೆದಿದ್ದ ಓಕ್ ಮರ ಬಳಸಿ ನಿರ್ಮಿಸಿದ್ದು, ಅಂಚುಗಳಲ್ಲಿ ಲೆಡ್‌ನ ಹಾಳೆ ಅಳವಡಿಸಲಾಗಿತ್ತು.

ಹೆನ್ರಿ ಸ್ಮಿತ್ ಅವರು ದಶಕದ ಹಿಂದೆಯೇ ಶವಪೆಟ್ಟಿಗೆ ನಿರ್ಮಿಸಿದ್ದರು. ಅಂತ್ಯಕ್ರಿಯೆ ವಿಧಿ ಉಸ್ತುವಾರಿ ವಹಿಸುವ ಎರಡು ಸಂಸ್ಥೆಗಳ ಉಸ್ತುವಾರಿಯಲ್ಲಿ ಇದನ್ನು ಇರಿಸಲಾಗಿತ್ತು. ಬಾಹ್ಯ ಕವಚ ಓಕ್‌ ಮರದ್ದಾಗಿದ್ದರೆ, ಒಳಗಿನ ಆವರಣ ಲೆಡ್‌ ಹಾಳೆಗಳನ್ನು ಆವರಿಸಿತ್ತು.

ಸಹಜವಾಗಿಯೇ ಶವಪೆಟ್ಟಿಗೆಯ ತೂಕ ಸಾಮಾನ್ಯದಕ್ಕಿಂತಲೂ ಹೆಚ್ಚಿತ್ತು. ಹೀಗಾಗಿ, ಆರು ಜನರ ಬದಲಿಗೆ ಸೇನಾಪಡೆಗಳ ಎಂಟು ಯೋಧರನ್ನು ಇದನ್ನು ಹೊರಲು ನಿಯೋಜಿಸಲಾಗಿತ್ತು.

ADVERTISEMENT

ಈ ಹಿಂದೆ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್, ರಾಜ ಫಿಲಿಪ್‌, ರಾಣಿ ಡಯಾನಾ ಅವರ ಪಾರ್ಥಿವ ಶರೀರ ಸಾಗಣೆಗೆ ಇಂತಹುದೇ ಶವಪೆಟ್ಟಿಗೆ ರಚಿಸಲಾಗಿತ್ತು. ಶವವು ತ್ವರಿತವಾಗಿ ಕೊಳೆಯದೇ ಎಷ್ಟು ಸಾಧ್ಯವೋ ಅಷ್ಟು ದಿನ ಹಾಗೆಯೇ ಇರಬೇಕು ಎಂಬುದು ಇಂತಹ ಶವಪೆಟ್ಟಿಗೆಯನ್ನು ನಿರ್ಮಿಸುವುದರ ಉದ್ದೇಶವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಸಾರಾ ಹೇಯ್ಸ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.