ADVERTISEMENT

ರಾಹುಲ್‌ ದೇವ್‌: ಪಾಕಿಸ್ತಾನ ವಾಯುಪಡೆಯ ಮೊದಲ ಹಿಂದೂ ಪೈಲಟ್‌

ಪಿಟಿಐ
Published 7 ಮೇ 2020, 2:33 IST
Last Updated 7 ಮೇ 2020, 2:33 IST
ಪಾಕಿಸ್ತಾನ ವಾಯು ಪಡೆ ಪೈಲಟ್‌ ರಾಹುಲ್‌ ದೇವ್‌
ಪಾಕಿಸ್ತಾನ ವಾಯು ಪಡೆ ಪೈಲಟ್‌ ರಾಹುಲ್‌ ದೇವ್‌   

ಇಸ್ಲಾಮಾಬಾದ್‌: ಪಾಕಿಸ್ತಾನ ವಾಯು ಪಡೆಗೆ ಇದೇ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಯೊಬ್ಬರು ಆಯ್ಕೆಯಾಗಿದ್ದಾರೆ. ಪಾಕಿಸ್ತಾನದ ಹಿಂದೂ ಯುವಕ ರಾಹುಲ್‌ ದೇವ್‌ ಜನರಲ್‌ ಡ್ಯೂಟಿ ಪೈಲಟ್‌ ಆಫೀಸರ್‌ ಆಗಿಸೇರ್ಪಡೆಯಾಗಿರುವುದಾಗಿ ಪಾಕಿಸ್ತಾನ ವಾಯು ಪಡೆ (ಪಿಎಎಫ್‌) ಟ್ವೀಟ್‌ ಮಾಡಿದೆ.

ರಾಹುಲ್‌ ದೇವ್‌ ಸಿಂಧ್‌ ಪ್ರಾಂತ್ಯದ ಥಾರ್‌ಪಾರ್ಕರ್‌ ಜಿಲ್ಲೆಯವರು.

ಇತ್ತೀಚೆಗೆ ಯುವಕ ರಾಹುಲ್‌ ಫೋಟೊ ಪ್ರಕಟಿಸಿರುವ ಪಾಕಿಸ್ತಾನ ವಾಯು ಪಡೆ, 'ಕೋವಿಡ್‌–19 ಆತಂಕದ ನಡುವೆ ಶುಭ ಸಮಾಚಾರ. ಥಾರ್‌ಪಾರ್ಕರ್‌ನ ಸಣ್ಣ ಹಳ್ಳಿಯಿಂದ ಬಂದಿರುವ ರಾಹುಲ್‌ ದೇವ್‌, ಪಿಎಎಫ್‌ನಲ್ಲಿ ಜನರಲ್‌ ಡ್ಯೂಟಿ ಪೈಲಟ್‌ ಆಗಿ ಆಯ್ಕೆಯಾಗಿದ್ದಾರೆ' ಎಂದು ಪ್ರಕಟಿಸಿದೆ.

ADVERTISEMENT

'ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಯುವಕನೊಬ್ಬ ಪಾಕಿಸ್ತಾನ ವಾಯು ಪಡೆಯ ಜನರಲ್‌ ಡ್ಯೂಟಿ ಪೈಲಟ್‌ ಆಗಿ ನೇಮಕವಾಗಿರುವುದು' ಎಂದು ಬುಧವಾರ ರೇಡಿಯೊ ಪಾಕಿಸ್ತಾನ ಹೇಳಿದೆ.

ಪಿಎಎಫ್‌ ಅಡೆತಡೆಗಳನ್ನು ತೊರೆದಿರುವುದನ್ನು ಹೇಳುತ್ತಿದೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಕಳೆದ ವರ್ಷ, ಖೈಬರ್‌–ಪಾಕ್‌ಥುಂಖ್ವಾ ಪ್ರದೇಶದ ಕೈನತ್‌ ಜುನೈದ್‌ ಫೈಟರ್‌ ಪೈಲಟ್‌ ತರಬೇತಿಗೆ ಆಯ್ಕೆಯಾದ ಮೊದಲ ಮಹಿಳಾಪೈಲಟ್‌ ಆಗಿದ್ದಾರೆ. ಜನರಲ್‌ ಡ್ಯೂಟಿ ಪೈಲಟ್‌ ಪರೀಕ್ಷೆಯಲ್ಲಿ ಜುನೈದ್‌ ಉತ್ತಮ ಪ್ರದರ್ಶನ ತೋರಿದ್ದರು. ಆಕೆಯ ತಂದೆ ಅಹ್ಮದ್‌ ಜುನೈದ್‌ ಪಾಕಿಸ್ತಾನ ವಾಯು ಪಡೆಯಲ್ಲಿ ಸ್ಕ್ವಾಡ್ರನ್‌ ಲೀಡರ್‌ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.