ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಟ್ರಕ್‌ನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ.
ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿರುವ ರಾಹುಲ್ ಗಾಂಧಿ, ಭಾರತ ಮೂಲದ ಟ್ರಕ್ ಚಾಲಕರ ದೈನಂದಿನ ಜೀವನದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಟ್ರಕ್‌ನಲ್ಲಿ ರಾಹುಲ್ ಗಾಂಧಿ ಪ್ರಯಾಣ; ಚಾಲಕರ ಮನದ ಮಾತು ಆಲಿಕೆ
ಇತ್ತೀಚೆಗೆ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ, ಟ್ರಕ್ ಚಾಲಕರ ಸಮಸ್ಯೆಗಳನ್ನು ಆಲಿಸಿದ್ದರು.
ಅಮೆರಿಕದಲ್ಲಿ ಭಾರತ ಮೂಲದ ಟ್ರಕ್ ಚಾಲಕರಾದ ತಲ್ಜಿಂದರ್ ಸಿಂಗ್ ವಿಕ್ಕಿ ಗಿಲ್ ಮತ್ತು ರಂಜೀತ್ ಸಿಂಗ್ ಬನಿಪಾಲ್ ಅವರೊಂದಿಗೆ 190 ಕಿ.ಮೀ. ಟ್ರಕ್ ಯಾತ್ರೆಯಲ್ಲಿ ಸಂವಾದ ನಡೆಸುತ್ತಾ ರಾಹುಲ್ ಗಾಂಧಿ ಪ್ರಯಾಣ ಬೆಳೆಸಿದರು.
ಭಾರತಕ್ಕೆ ಹೋಲಿಸಿದರೆ ಅಮೆರಿಕದ ಟ್ರಕ್‌ಗಳಲ್ಲಿ ಚಾಲಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ರಾಹುಲ್ ಮನಗಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ಟ್ರಕ್ ಉದ್ಯಮ ಉತ್ತೇಜಿಸಲು ಅಮೆರಿಕದಿಂದ ಸಾಕಷ್ಟು ಪಾಠಗಳನ್ನು ಕಲಿಯಬಹುದಾಗಿದೆ. ಭಾರತೀಯ ಟ್ರಕ್ ಚಾಲಕರು, ಸರಕು ಸಾಗಣೆಯ ಜೀವನಾಡಿಯಾಗಿದ್ದು, ಘನತೆಯುಕ್ತ ಜೀವನಕ್ಕೂ ಅರ್ಹರಾಗಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಟ್ರಕ್ ಯಾತ್ರೆಯ ವೇಳೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಾಡನ್ನು ರಾಹುಲ್ ಗಾಂಧಿ ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.