ಮಿನ್ನೆಪೊಲೀಸ್ (ಅಮೆರಿಕ): ಕಪ್ಪು ವರ್ಣೀಯ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಅವರನ್ನು ಪೊಲೀಸ್ ಹತ್ಯೆ ಮಾಡಿದ ಪ್ರಕರಣಕ್ಕೆ ಒಂದು ವರ್ಷವಾಗಿದ್ದು, ಫ್ಲಾಯ್ಡ್ ಗೌರವಾರ್ಥ ಜಾಗತಿಕ ಮಟ್ಟದಲ್ಲಿ ವಿವಿಧೆಡೆ ರ‍್ಯಾಲಿಗಳು ಮತ್ತು ಹಲವು ಕಾರ್ಯಕ್ರಮಗಳು ನಡೆದವು.
ಮಿನ್ನೆಪೊಲೀಸ್‌ನಲ್ಲಿ ಫ್ಲಾಯ್ಡ್ ಗೌರವಾರ್ಥ ಬೀದಿಗಳಲ್ಲಿ ಕುಟುಂಬ ಸ್ನೇಹಿ ಉತ್ಸವ, ಸಂಗೀತ ಗೋಷ್ಠಿಗಳ ಜತೆಗೆ ಜನರು ಜನರು ಮೌನವಾಗಿ ಗೌರವ ಸಲ್ಲಿಸಿದರು.
ನ್ಯೂಯಾರ್ಕ್, ಲಾಸ್ ಏಂಜಲೀಸ್, ಜರ್ಮನಿ, ಗ್ರೀಸ್ ಮತ್ತು ಸ್ಪೇನ್‌ನಲ್ಲಿ ಹಲವೆಡೆ ಫ್ಲಾಯ್ಡ್ ಸ್ಮರಣಾರ್ಥ ರ‍್ಯಾಲಿಗಳು, ಮೌನಾಚರಣೆಗಳು ನಡೆದವು. ಜನಾಂಗೀಯ ನ್ಯಾಯ ಆಂದೋಲನವನ್ನು ಸಜ್ಜುಗೊಳಿಸಿದ ಹಲವರು, ಬದಲಾವಣೆಯ ಕರೆಗಾಗಿ ಅನೇಕ ವಿಡಿಯೊಗಳನ್ನೂ ಪ್ರದರ್ಶಿಸಿದರು.
ಮಿನ್ನೆಪೊಲೀಸ್‌ನ ಡೌನ್‌ಟೌನ್ ಉದ್ಯಾನದಲ್ಲಿ ನಡೆದ ‘ಸೆಲೆಬ್ರೇಷನ್ ಆಫ್ ಲೈಫ್’ ಕಾರ್ಯಕ್ರಮದಲ್ಲಿ ಫ್ಲಾಯ್ಡ್‌ನ ಸಹೋದರಿ ಬ್ರಿಡ್ಜೆಟ್ ಮತ್ತು ಕುಟುಂಬದ ಇತರ ಸದಸ್ಯರು ಪಾಲ್ಗೊಂಡಿದ್ದರು.
ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್9 ನಿಮಿಷ 29 ಸೆಕೆಂಡ್ ಕಾಲ ಫ್ಲಾಯ್ಡ್‌ನ ಕುತ್ತಿಗೆಯ ಮೇಲೆ ತನ್ನ ಕಾಲನ್ನು ಒತ್ತಿ ಹಿಡಿದಿದ್ದ ದ್ಯೋತಕವಾಗಿ ಫ್ಲಾಯ್ಡ್ ಮರಣ ಹೊಂದಿದ ಸ್ಥಳದಲ್ಲಿನ ಉಕ್ಕಿನ ಶಿಲ್ಪದ ಸುತ್ತಲೂ ನೆರೆದ ಜನರು 9 ನಿಮಿಷ 29 ಸೆಕೆಂಡ್‌ಗಳ ಕಾಲ ಮಂಡಿಯೂರಿ ಕುಳಿತರು.
ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದ ಫ್ಲಾಯ್ಡ್ ಕುಟುಂಬದ ಸದಸ್ಯರು, ಫ್ಲಾಯ್ಡ್ ಹೆಸರಿನಲ್ಲಿ ಪೊಲೀಸ್ ಕಾನೂನು ಬದಲಾವಣೆಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ... ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.