ADVERTISEMENT

ನ್ಯೂಯಾರ್ಕ್: ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮ ಮಂದಿರದ ಪ್ರತಿಕೃತಿ

ಪಿಟಿಐ
Published 3 ಜುಲೈ 2024, 12:22 IST
Last Updated 3 ಜುಲೈ 2024, 12:22 IST
ರಾಮ ಮಂದಿರ
ರಾಮ ಮಂದಿರ   

ವಾಷಿಂಗ್ಟನ್: ನ್ಯೂಯಾರ್ಕ್‌ನಲ್ಲಿ ಆಗಸ್ಟ್‌ 18ರಂದು ನಡೆಯಲಿರುವ ಐತಿಹಾಸಿಕ ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮ ಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಇದು ನ್ಯೂಯಾರ್ಕ್‌ ಸುತ್ತಮುತ್ತಲಿನ ಸಹಸ್ರಾರು ಸಂಖ್ಯೆಯ ಭಾರತ ಮೂಲದ ಅಮೆರಿಕನ್ನರನ್ನು ಆಕರ್ಷಿಸಲಿದೆ.

ದೇಗುಲದ ಪ್ರತಿಕೃತಿಯು 18 ಅಡಿ ಉದ್ದ, 9 ಅಡಿ ಅಗಲ ಹಾಗೂ 8 ಅಡಿ ಎತ್ತರವಿರಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಮೆರಿಕ ಘಟಕದ (ವಿಎಚ್‌ಪಿಎ) ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ರಾಮ ಮಂದಿರದ ಪ್ರತಿಕೃತಿಯು ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದ್ದಾರೆ.

ADVERTISEMENT

ನ್ಯೂಯಾರ್ಕ್‌ನಲ್ಲಿ ನಡೆಯುವ ‘ಇಂಡಿಯಾ ಡೇ’ ಪರೇಡ್‌, ಭಾರತದ ಹೊರಗೆ ನಡೆಯಲಿರುವ ಸ್ವಾತಂತ್ರ್ಯ ದಿನದ ಅತಿದೊಡ್ಡ ಆಚರಣೆಯಾಗಿದೆ. ವಾರ್ಷಿಕ ಪರೇಡ್‌ ಅನ್ನು 1.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಲಿದ್ದಾರೆ.

ಫೆಡರೇಷನ್ ಆಫ್‌ ಇಂಡಿಯನ್ ಅಸೋಸಿಯೇಷನ್ಸ್‌ (ಎಫ್‌ಐಎ) ಆಯೋಜಿಸಿರುವ ಈ ಪರೇಡ್‌ನಲ್ಲಿ, ಭಾರತ ಮೂಲದ ಅಮೆರಿಕನ್ನರ ವೈವಿಧ್ಯಮಯ ಸಂಸ್ಕೃತಿಯು ಅನಾವರಣಗೊಳ್ಳಲಿದೆ.

ವಿಎಚ್‌ಪಿ ಈಚೆಗೆ ಆಯೋಜಿಸಿದ್ದ ರಾಮ ಮಂದಿರ ರಥಯಾತ್ರೆಯು 60 ದಿನಗಳಲ್ಲಿ 48 ರಾಜ್ಯಗಳ 851 ದೇಗುಲಗಳಿಗೆ ಭೇಟಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.