ಕರಾಚಿ: ರಂಜಾನ್ ತಿಂಗಳಲ್ಲಿ ಪಾಕಿಸ್ತಾನದ ಕರಾಚಿ ನಗರದಲ್ಲಿ 3 ರಿಂದ 4 ಲಕ್ಷ ಭಿಕ್ಷುಕರು ಬೀಡುಬಿಟ್ಟಿದ್ದು ಅಪರಾಧಗಳ ಸಂಖ್ಯೆ ಕೂಡ ಏರಿಕೆಯಾಗಿದೆ ಎಂದು ಕರಾಚಿಯ ಹೆಚ್ಚುವರಿ ಐಜಿಪಿ ಇಮ್ರಾನ್ ಯಾಕೂಬ್ ಮಿನ್ಹಾಸ್ ಹೇಳಿದ್ದಾರೆ.
ಈದ್ ಹಬ್ಬದ ಸಂದರ್ಭದಲ್ಲಿ ಕರಾಚಿಯಲ್ಲಿ ಸಾಮಾನ್ಯವಾಗಿ ಭಿಕ್ಷುಕರು ಬರುತ್ತಾರೆ. ಮುಖ್ಯವಾಗಿ ಸಿಂಧ್, ಬಲೂಚಿಸ್ತಾನ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕರಾಚಿಗೆ ಭಿಕ್ಷುಕರು ಬಂದು ಸೇರುತ್ತಾರೆ. ಎಷ್ಟೇ ಭದ್ರತೆ ಒದಗಿಸಿ, ಕಠಿಣ ಕ್ರಮ ಕೈಗೊಂಡರೂ ಸುಲಿಗೆಯಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ಬಾರಿ ರಂಜಾನ್ ತಿಂಗಳಲ್ಲಿ 19 ಜನ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು, ಈ ಬಾರಿ ಜನವರಿಯಿಂದ ಈವರೆಗೆ ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಬೀದಿ ಗಲಭೆಯಂತಹ ಅಪರಾಧಗಳನ್ನು ತಡೆದು ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಸಿಂಧ್ ಹೈಕೋರ್ಟ್ ಅಧಿಕಾರಿಗಳಿಗೆ ಒಂದು ತಿಂಗಳು ಸಮಯಾವಕಾಶ ನೀಡಿದೆ ಎಂದು ಜಿಯೋ ನ್ಯೂಸ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.