ಧರ್ಮಶಾಲಾ (ಹಿಮಾಚಲ ಪ್ರದೇಶ) : ಏಷ್ಯಾದ ಅತ್ಯುನ್ನತ ಗೌರವ ‘ರೇಮನ್ ಮ್ಯಾಗ್ಸೆಸೆ‘ ಪ್ರಶಸ್ತಿಯನ್ನು ಟಿಬೆಟಿಯನ್ ಧರ್ಮ ಗುರು ದಲೈ ಲಾಮ(87 ವರ್ಷ) ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.
ಮ್ಯಾಗ್ಸೆಸೆ ಪ್ರತಿಷ್ಠಾನದ ಸದಸ್ಯರು ಇಲ್ಲಿನ ದಲೈ ಲಾಮಾ ಕಚೇರಿಯಲ್ಲಿ ಅವರಿಗೆ ಪ್ರಶಸ್ತಿ ನೀಡಿದರು.
‘ಇದು ದಲೈ ಲಾಮಾರಿಗೆ ಸಂದ ಮೊದಲ ಅಂತರರಾಷ್ಟ್ರೀಯ ಪುರಸ್ಕಾರವಾಗಿದೆ. ಇದು ಟಿಬೆಟ್ ಸಮುದಾಯದ ಬೌದ್ಧ ಧರ್ಮ ರಕ್ಷಣೆ ಹಾಗೂ ನಾಯಕತ್ವವನ್ನು ಗುರುತಿಸಿ ಲಾಮಾ ಅವರಿಗೆ ನೀಡಿದ ಗೌರವವಾಗಿದೆ‘ ಎಂದು ದಲೈ ಲಾಮ ಕಚೇರಿಯ ಮೂಲಗಳು ತಿಳಿಸಿವೆ.
1957ರಲ್ಲಿ ನಿಧನರಾದ ಫಿಲಿಫೈನ್ಸ್ ಮಾಜಿ ಅಧ್ಯಕ್ಷ ರೇಮನ್ ಮ್ಯಾಗ್ಸೆಸೆ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.
2019ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪತ್ರಕರ್ತ ರವೀಶ್ ಕುಮಾರ್ ಅವರಿಗೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.