ಹನೋಯಿ: ಈಗ್ಗೆ 30 ವರ್ಷಗಳಿಂದ ವಿಜ್ಞಾನಿಗಳಿಗೆ ಕಾಣಿಸದೇ ಇದ್ದ ಜಿಂಕೆ ರೀತಿಯ ಪ್ರಾಣಿಯೊಂದು ದಕ್ಷಿಣ ವಿಯೆಟ್ನಾಂನಲ್ಲಿ ಪತ್ತೆಯಾಗಿದೆ.
ಬೆನ್ನಿನ ಮೇಲೆ ಬೆಳ್ಳಿಯ ಬಣ್ಣ ಹೊಂದಿರುವ ಚಿವ್ರೊಟೈನ್ ಪ್ರಾಣಿಯ ಚಿತ್ರಗಳು ಈಗ ಲಭ್ಯವಾಗಿವೆ. ಇದನ್ನು ವಿಯೆಟ್ನಾಂನ ಇಲಿ ಜಿಂಕೆ ಎಂದು ಕರೆಯುತ್ತಾರೆ ಎಂದು ಪ್ರಾಣಿ ಸಂರಕ್ಷಕರು ಹೇಳಿದ್ದಾರೆ. ಅರಣ್ಯದಲ್ಲಿ ಇಡಲಾಗುವ ಕ್ಯಾಮೆರಾಗಳಿಗೆ ಇದು ಸೆರೆ ಸಿಕ್ಕಿದೆ.
‘ಮೊಲದ ಗಾತ್ರದ ಈ ಪ್ರಾಣಿ ಜಿಂಕೆ ಅಥವಾ ಇಲಿಯಲ್ಲ. ಆದರೆ ಇದಕ್ಕೆ ಈ ರೀತಿಯ ಅಡ್ಡ ಹೆಸರು ಇರಬಹುದು. ಇದು ವಿಶ್ವದ ಅತಿ ಸಣ್ಣ ಗೊರಸು ಸಸ್ತನಿ’ ಎಂದು ಅವರು ಹೇಳಿಕೆಯೊಂದರಲ್ಲಿ ವಿವರಿಸಿದ್ದಾರೆ.
‘ಈ ಪ್ರಾಣಿ ನಾಚಿಕೆ ಸ್ವಭಾವದ್ದು ಮತ್ತು ಏಕಾಂಗಿಯಾಗಿರುತ್ತದೆ. ಎರಡು ಸಣ್ಣ ಕೋರೆ ಹಲ್ಲುಗಳನ್ನು ಹೊಂದಿರುವ ಇದು, ಗೊರಸಿನ ಸಹಾಯದಿಂದ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.