ADVERTISEMENT

ಸಹರಾ ಮರುಭೂಮಿಯಲ್ಲಿ ಭಾರಿ ಮಳೆ: 50 ವರ್ಷದಿಂದ ಒಣಗಿ ಹೋಗಿದ್ದ ಸರೋವರ ಭರ್ತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2024, 4:17 IST
Last Updated 13 ಅಕ್ಟೋಬರ್ 2024, 4:17 IST
<div class="paragraphs"><p>ಸಹರಾ ಮರುಭೂಮಿಯಲ್ಲಿ ಭಾರಿ ಮಳೆ: 50 ವರ್ಷದಿಂದ ಒಣಗಿ ಹೋಗಿದ್ದ ಸರೋವರ ಭರ್ತಿ!</p></div>

ಸಹರಾ ಮರುಭೂಮಿಯಲ್ಲಿ ಭಾರಿ ಮಳೆ: 50 ವರ್ಷದಿಂದ ಒಣಗಿ ಹೋಗಿದ್ದ ಸರೋವರ ಭರ್ತಿ!

   

ಬೆಂಗಳೂರು: ಉತ್ತರ ಆಫ್ರಿಕಾ ಖಂಡದ ಬಹುತೇಕ ಭಾಗ ಆವರಿಸಿರುವ ಸಹಾರಾ ಮರುಭೂಮಿಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು ಕೆಲಕಡೆ ಪ್ರವಾಹ ಪರಿಸ್ಥಿತಿ ಕಂಡು ಬಂದು ಆಶ್ಚರ್ಯ ಮೂಡಿಸಿದೆ.

ವಿಚಿತ್ರವೆಂದರೆ ಮೊರಾಕ್ಕೊದ ರಾಜಧಾನಿ ರಬಾಟಾದಿಂದ 450 ಕಿ.ಮೀ ದೂರದಲ್ಲಿ ಆಗ್ನೇಯ ಭಾಗದಲ್ಲಿರುವ ಮೆರ್ಜೌಗಾ ಎಂಬ ಪ್ರದೇಶದಲ್ಲಿ 50 ವರ್ಷದಿಂದ ಒಣಗಿ ಹೋಗಿದ್ದ ಇರಿಕಿ ಸರೋವರ (ಮರಳುಗಾಡಿನ ಲಗೂನ್) ಇದೇ ಮೊದಲ ಬಾರಿಗೆ ಭಾರಿ ಮಳೆಯಿಂದ ತುಂಬಿಕೊಂಡಿದೆ.

ADVERTISEMENT

ಈ ಸರೋವರದ ಚಿತ್ರ, ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ.

ಈ ಭಾಗದಲ್ಲಿ ವರ್ಷದಲ್ಲಿ ಕೇವಲ 250 ಮಿಲಿ ಮೀಟರ್ ಮಳೆಯಾದರೆ ಹೆಚ್ಚು. ಆದರೆ ಮೊನ್ನೆ ಸುರಿದ ಒಂದೇ ದಿನದ ಮಳೆಯ ಪ್ರಮಾಣ 100 ಮಿಲಿ ಮೀಟರ್!

ನಾವು 50 ವರ್ಷಗಳಿಂದ ಇಷ್ಟು ಪ್ರಮಾಣದ ಮಳೆಯನ್ನು ಕಂಡಿರಲಿಲ್ಲ. ಉಷ್ಣವಲಯದ ಚಂಡಮಾರುತದ ಪರಿಣಾಮದಿಂದ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದೆ. ಇರಿಕಿ ಸರೋವರಕ್ಕೆ ಜೀವ ಕಳೆ ಬಂದಿದೆ ಎಂದು ಮೊರಾಕ್ಕೊದ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಹೂಸಿನ್ ಯೂಬೇಬ್ ಹೇಳಿದ್ದಾರೆ.

ಕಳೆದ ಆರು ವರ್ಷಗಳಿಂದ ಮಳೆಯೇ ಆಗಿರಲಿಲ್ಲ. ಇದರಿಂದ ಮರುಭೂಮಿ ಪ್ರದೇಶದ ರೈತರು, ಜನಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಮಳೆ ಜಲಮರುಪೂರಣಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಸಹರಾ ಮರುಭೂಮಿಯೂ ಜಗತ್ತಿನ ಅತಿದೊಡ್ಡ ಶುಷ್ಕ ಮರುಭೂಮಿಯಾಗಿದ್ದು 92 ಲಕ್ಷ ಚದರ ಕಿ.ಮೀ ವ್ಯಾಪ್ತಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.