ADVERTISEMENT

ಅತ್ಯುತ್ತಮ ಸ್ಥಿತಿಯಲ್ಲಿ ಭಾರತ–ಅಮೆರಿಕ ಬಾಂಧವ್ಯ: ಎರಿಕ್ ಗಾರ್ಸೆಟ್ಟಿ

ಪಿಟಿಐ
Published 25 ಜೂನ್ 2024, 14:30 IST
Last Updated 25 ಜೂನ್ 2024, 14:30 IST
<div class="paragraphs"><p>ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ</p></div>

ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ

   

ಆಕ್ಸನ್ ಹಿಲ್: ಭಾರತ–ಅಮೆರಿಕ ನಡುವಿನ ಬಾಂಧವ್ಯವು ಹಿಂದೆಂದಿಗಿಂತಲೂ ಉತ್ತಮವಾಗಿರುವುದು ಮಾತ್ರವಲ್ಲದೇ ಎರಡೂ ರಾಷ್ಟ್ರಗಳ ನಡುವಿನ ಒಡಂಬಡಿಕೆಗಳು ಹೆಚ್ಚಾಗುತ್ತಿವೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಪ್ರತಿಪಾದಿಸಿದರು.

ಭಾರತವು ಮುಖ್ಯ ಪಾತ್ರ ವಹಿಸಿರುವ ‘ಸೆಲೆಕ್ಟ್ ಯುಎಸ್‌ಎ’ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ಭಾರತಕ್ಕೆ ಎಂದೂ ಇಷ್ಟು ಹತ್ತಿರವಾಗಿರಲಿಲ್ಲ. ಭಾರತ ಮೂಲದ ಅಮೆರಿಕನ್ನರು ಇಲ್ಲಿನ ಜನಸಂಖ್ಯೆಯಲ್ಲಿ ಶೇ 1.5ರಷ್ಟಿದ್ದು, ಅಮೆರಿಕದ ಶೇ 6ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಭಾರತವು ಅಮೆರಿಕದ ಅತ್ಯಂತ ಯಶಸ್ವಿ ವಲಸೆ ಸಮುದಾಯವಾಗಿದೆ’ ಎಂದು ಹೇಳಿದರು.

ADVERTISEMENT

ಭಾರತ ಮೂಲದ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿ ಅಮೆರಿಕದಲ್ಲಿ ಹೂಡಿಕೆ ಮಾಡುವ ಬಗ್ಗೆ ಘೋಷಣೆ ಮಾಡಿದ ಅವರು, ‘ಈಗ ಅಮೆರಿಕದವರು ಭಾರತದ ಬ್ರ್ಯಾಂಡ್‌ಗಳು ಮತ್ತು ಭಾರತದ ಕಂಪನಿಗಳ ಜತೆ ಹೆಚ್ಚು ಪರಿಚಿತರಾಗುತ್ತಿದ್ದಾರೆ. ನಾವಿಬ್ಬರೂ ಒಟ್ಟಿಗೆ ಮೂರನೇ ರಾಷ್ಟ್ರಗಳಲ್ಲಿ, ಮೂಲಸೌಕರ್ಯ, ಇಂಧನ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ನಾಳಿನ ಸಮೃದ್ಧಿಯನ್ನು ಸಾಧಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.