ವಾಷಿಂಗ್ಟನ್: 'ಧಾರ್ಮಿಕ ಸ್ವಾತಂತ್ರ್ಯವು ಅಮೆರಿಕನ್ನರಿಗೆ ಮೂಲಭೂತವಾಗಿ ಅಮೂಲ್ಯವಾದುದು. ಇದನ್ನು ಬೆಂಬಲಿಸುವುದು ಅಧ್ಯಕ್ಷ ಜೋ ಬೈಡನ್ ಅವರ ಪ್ರಮುಖ ಆದ್ಯತೆಯೂ ಆಗಿದೆ’ ಎಂದುಅಮೆರಿಕ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದರು.
ಬೈಡನ್ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಅಮೆರಿಕನ್ನರು ಮತ್ತುಸಮುದಾಯದ ಮುಖಂಡರು ಸೇರಿ ಪ್ರಮುಖರು ದೀಪಾವಳಿ ನಿಮಿತ್ತ ಬುಧವಾರ ಸೇರಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಧಾರ್ಮಿಕ ಸ್ವಾತಂತ್ರ್ಯವು ರಾಷ್ಟ್ರದ ರಾಜತಾಂತ್ರಿಕತೆಯ ಅಮೂಲ್ಯವಾದ ಭಾಗವೆನಿಸಿದೆ. ಇದು ಇತರ ರಾಷ್ಟ್ರಗಳೊಂದಿಗೆ ಮತ್ತು ವಿಶ್ವದ ಜನರೊಂದಿಗೆ ಬಾಂಧವ್ಯ ಗಟ್ಟಿಗೊಳಿಸಲು ನಮಗೆ ಸಹಾಯ ಮಾಡುತ್ತದೆ. ದೀಪಾವಳಿಯಂತಹ ಹಬ್ಬಗಳನ್ನು ಇಷ್ಟೊಂದು ಸಂಭ್ರಮದಿಂದ ಆಚರಿಸುವುದನ್ನು ನೋಡಿದರೆ ಈ ದೇಶದಲ್ಲಿಧಾರ್ಮಿಕ ಸ್ವಾತಂತ್ರ್ಯಕ್ಕೆ ನಮ್ಮ ಬೆಂಬಲ ಹೇಗಿದೆ ಎನ್ನುವುದು ತಿಳಿಯಬಹುದು. ಧಾರ್ಮಿಕ ಸ್ವಾತಂತ್ರ್ಯ ಬೆಂಬಲಿಸುವ ಮತ್ತೊಂದು ಮಾರ್ಗವೆಂದರೆ ಇಂತಹ ಹಬ್ಬಗಳನ್ನು ಆಚರಣೆ ಮಾಡುವುದಾಗಿದೆ’ಎಂದರು.
‘ದೀಪಾವಳಿಯು ದುಷ್ಟತೆಯ ವಿರುದ್ಧ ಒಳಿತಿಗೆ ಸಿಕ್ಕ ವಿಜಯ, ಕತ್ತಲೆ ಕಳೆದು ಬೆಳಕು ಮೂಡುವ ಹಾಗೂ ಅಜ್ಞಾನ ಅಳಿಸಿ ಜ್ಞಾನ ಬೆಳಗುವ ಸಂಕೇತವೆನಿಸಿದೆ. ದೀಪಾವಳಿಯು ಅತ್ಯಂತ ಪವಿತ್ರವಾದ ಜೀವನ ಮೌಲ್ಯಗಳು, ಕುಟುಂಬದ ಪ್ರೀತಿ, ಪ್ರೀತಿಪಾತ್ರರ ಬಗ್ಗೆ ದಯೆ, ಕ್ಷಮೆ, ಅನುಗ್ರಹ ಹಾಗೂ ಹೊಸ ಆರಂಭದ ಆಚರಣೆಯಾಗಿದೆ. ಹಬ್ಬದ ರಜಾದಿನವು ನಮಗೆ ಧರ್ಮದ ಮಹತ್ವ, ಸಮುದಾಯಕ್ಕೆ ನಾವು ಸಲ್ಲಿಸಬೇಕಾದ ಸೇವೆ ಮತ್ತು ಒಡನಾಟವನ್ನು ನೆನಪಿಸುತ್ತದೆ’ ಎಂದು ಬ್ಲಿಂಕನ್ ಹೇಳಿದರು.
ಅಮೆರಿಕದ ವಿದೇಶಾಂಗ ಸಚಿವಾಲಯವು ಪ್ರಧಾನ ಕಚೇರಿಯಲ್ಲಿ ದೀಪಾವಳಿಯ ಸಮಾರಂಭ ಆಯೋಜಿಸಿದ್ದುಇದೇ ಮೊದಲು. ಅಧ್ಯಕ್ಷ ಜೋ ಬೈಡನ್ ಮತ್ತು ಜಿಲ್ ಬೈಡನ್ ದಂಪತಿಸೋಮವಾರ ಶ್ವೇತಭವನದಲ್ಲಿ ದೀಪಾವಳಿ ಆಚರಣೆಗೆ ಅದ್ಧೂರಿ ಸಮಾರಂಭ ಆಯೋಜಿಸಿದ್ದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ತಮ್ಮ ನೌಕಾ ವೀಕ್ಷಣಾಲಯ ನಿವಾಸದಲ್ಲಿ ಭಾರತೀಯ ಮೂಲದ ಸಮುದಾಯದ ಮುಖಂಡರೊಂದಿಗೆ ದೀಪಾವಳಿಯನ್ನುಅದ್ಧೂರಿಯಾಗಿ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.