ADVERTISEMENT

2021ರಲ್ಲಿ ಜಾಗತಿಕವಾಗಿ 200 ಪರಿಸರ ಹೋರಾಟಗಾರರ ಹತ್ಯೆ

ಏಜೆನ್ಸೀಸ್
Published 29 ಸೆಪ್ಟೆಂಬರ್ 2022, 13:17 IST
Last Updated 29 ಸೆಪ್ಟೆಂಬರ್ 2022, 13:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೆಕ್ಸಿಕೊ ನಗರ:ವಿಶ್ವದಾದ್ಯಂತ 2021ನೇ ಸಾಲಿನಲ್ಲಿ 200 ಪರಿಸರ ಹೋರಾಟಗಾರರು ಮತ್ತು ಭೂ ರಕ್ಷಣಾ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಈ ಪೈಕಿ ಮೆಕ್ಸಿಕೊದಲ್ಲಿ 54 ಮಂದಿ ಕೊಲೆಯಾಗಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಗ್ಲೋಬಲ್ ವಿಟ್ನೆಸ್ ವಾರ್ಷಿಕ ವರದಿ ತಿಳಿಸಿದೆ.

ಲ್ಯಾಟಿನ್ ಅಮೆರಿಕದಲ್ಲಿಮುಕ್ಕಾಲು ಭಾಗದಷ್ಟು ಹತ್ಯೆಗಳು ನಡೆದರೆ,ಕೊಲಂಬಿಯಾ, ಬ್ರೆಜಿಲ್ ಮತ್ತು ನಿಕರಾಗುವಾದಲ್ಲಿ ಹತ್ಯೆಯಾದವರ ಸಂಖ್ಯೆ ಎರಡಂಕಿ ದಾಟಿವೆ. ಮೆಕ್ಸಿಕೊದಲ್ಲಿ 2020ರಲ್ಲಿ 30 ಪರಿಸರ ಹೋರಾಟಗಾರರು ಕೊಲೆಯಾಗಿದ್ದರು.

ಗ್ರಾಮೀಣ ಪ್ರದೇಶ ಮತ್ತು ನಿರ್ದಿಷ್ಟ ದೇಶಗಳಲ್ಲಿ ನಡೆದಿರುವ ಹಲವು ಹತ್ಯೆಗಳು ವರದಿಯೇ ಆಗಿಲ್ಲ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಗಣಿಗಾರಿಕೆಗೆ ಸಂಬಂಧಿಸಿದಂತೆ ವಿಶ್ವದ ವಿವಿಧೆಡೆ ನಡೆದಿರುವ ಘರ್ಷಣೆಗಳಲ್ಲಿ 27 ಜನರು ಹತ್ಯೆಯಾಗಿದ್ದಾರೆ.ಮೆಕ್ಸಿಕೊದಲ್ಲಿ ಗಣಿಗಾರಿಕೆಗೆ ಸಂಬಂಧಿಸಿ ಹದಿನೈದು ಕೊಲೆಗಳು ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.