ಸೋಲ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್‌ಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ವೈಯಕ್ತಿಕ ಬಳಕೆಗಾಗಿ ಕಿಮ್ ಅವರಿಗೆ ರಷ್ಯಾ ಅಧ್ಯಕ್ಷರು ಕಾರನ್ನು ನೀಡಿದ್ದಾರೆ ಎಂದು ಅಧಿಕೃತ ಮಾಧ್ಯಮವು ವರದಿ ಮಾಡಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕಿಮ್ ಮತ್ತು ಪುಟಿನ್ ಭೇಟಿಯಾದಾಗಿನಿಂದ ಉಭಯ ದೇಶಗಳ ಸಂಬಂಧ ಬೆಸೆದಿದೆ.
ಫೆ.18ರಂದು ರಷ್ಯಾ ನಿರ್ಮಿತ ಕಾರನ್ನು ಕಿಮ್ ಅವರ ಉನ್ನತ ಬೆಂಬಲಿಗರಿಗೆ ತಲುಪಿಸಲಾಗಿದೆ ಎಂದು ಅಧಿಕೃತ KCNA ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಲ್ಲದೆ, ಕಾರು ಕಳುಹಿಸಿದ್ದಕ್ಕೆ ಕಿಮ್ ಸಹೋದರಿ ಪುಟಿನ್ ಅವರಿಗೆ ಧನ್ಯವಾದ ತಿಳಿಸಿದ್ದು, ಇದು ಉನ್ನತ ನಾಯಕರ ನಡುವಿನ ವಿಶೇಷ ವೈಯಕ್ತಿಕ ಸಂಬಂಧಗಳನ್ನು ಸ್ಪಷ್ಟವಾಗಿಸುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಕಿಮ್ ಆಟೋಮೊಬೈಲ್ ಪ್ರಿಯರಾಗಿದ್ದು, ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳುವ ಐಷಾರಾಮಿ ವಿದೇಶಿ ವಾಹನಗಳ ದೊಡ್ಡ ಸಂಗ್ರಹವೇ ಅವರ ಬಳಿ ಇದೆ. ಆದರೆ ಈ ಬಾರಿ ಕಾರನ್ನು ರಷ್ಯಾದಿಂದ ಹೇಗೆ ರವಾನಿಸಲಾಗಿದೆ ಎಂಬುದನ್ನು ವರದಿಯಲ್ಲಿ ವಿವರಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.