ADVERTISEMENT

ನೆತನ್ಯಾಹು ಕುಟುಂಬವನ್ನೂ ಬೆನ್ನುಬಿಡದ ಕುತಂತ್ರಾಂಶ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:43 IST
Last Updated 7 ಫೆಬ್ರುವರಿ 2022, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೆರುಸಲೇಂ (ಎಪಿ): ಇಸ್ರೇಲ್‌ನ ಎನ್‌ಎಸ್‌ಒಕಂಪನಿಯ ಪೆಗಾಸಸ್‌ ಕುತಾಂತ್ರಂಶ ಬಳಸಿ ಭಾರತ, ಅಮೆರಿಕ ದೇಶದಲ್ಲಿ ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಇರುವಾಗಲೇ, ಇಂತಹದ್ದೇ ಕುತಾಂತ್ರಂಶ ಬಳಸಿ ಅದೇ ದೇಶದ ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಪುತ್ರ ಮತ್ತು ಸಲಹೆಗಾರರ ಮೇಲೆ ಬೇಹುಗಾರಿಕೆ ನಡೆಸಿರುವ ಬಗ್ಗೆ ವರದಿಯಾಗಿದೆ.

ನೆತನ್ಯಾಹು ಅವರ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿಯ ಮೇಲೆ ಕುತಂತ್ರಾಂಶ ಬಳಸಲಾಗಿತ್ತು ಎಂದುಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ನೆತನ್ಯಾಹು ಪುತ್ರ, ಅವರ ಇಬ್ಬರು ಸಂವಹನ ಸಲಹೆಗಾರರು ಮತ್ತು ಪ್ರಕರಣದ ಪ್ರತಿವಾದಿಯ ಪತ್ನಿಯನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಪೊಲೀಸರು ಕುತಂತ್ರಾಂಶದಿಂದ ಬೇಹುಗಾರಿಕೆನಡೆಸಿದ್ದಾರೆ ಎಂದು ಕ್ಯಾಲ್ಕಿಲಿಸ್ಟ್‌ ಪತ್ರಿಕೆ ಸೋಮವಾರ ವರದಿ ಮಾಡಿದೆ.

ನೆತನ್ಯಾಹು ಅವರು ಭ್ರಷ್ಟಾಚಾರ, ವಂಚನೆ ಮತ್ತು ವಿಶ್ವಾಸ ದ್ರೋಹ ಆರೋಪದ ಮೇಲೆ ಮೂರು ಪ್ರತ್ಯೇಕ ಪ‍್ರಕರಣ ವಿಚಾರಣೆ ಎದುರಿಸುತ್ತಿದ್ದಾರೆ. ಅವರ 12 ವರ್ಷಗಳ ಆಡಳಿತ ಕಳೆದ ಜೂನ್‌ನಲ್ಲಿ ಮುಕ್ತಾಯಗೊಂಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.