ಜಕಾರ್ತ (ರಾಯಿಟರ್ಸ್): ‘ಕಳೆದ ವಾರದಿಂದ ಪಪುವಾ ಪ್ರದೇಶದಲ್ಲಿ ಕಾಣೆಯಾಗಿರುವ ಸರಕು ಸಾಗಣೆ ಹಡಗು ಪತ್ತೆಗೆ ಇಂಡೊನೇಷ್ಯಾ ರಕ್ಷಣಾ ತಂಡವೊಂದು ಕಾರ್ಯಾಚರಣೆ ಮುಂದುವರಿಸಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಹಡಗಿನಲ್ಲಿ 12 ಮಂದಿ ಇದ್ದರು.
ದೂರಸಂಪರ್ಕ ಟವರ್‌ಗಳನ್ನು ನಿರ್ಮಿಸಲು ಅಗತ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ಪಪುವಾದ ತಿಮಿಕಾ ಪ್ರದೇಶದಿಂದ ಹಡಗಿನ ಮೂಲಕ ಇಂಡೊನೇಷ್ಯಾವು ತರಿಸಿಕೊಳ್ಳುತ್ತಿತ್ತು. ಹಡಗು ಯಾವ ಕಾರಣಕ್ಕಾಗಿ ಸಂಪರ್ಕ ಕಡಿದುಕೊಂಡಿತು ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.