ಲಂಡನ್ : ಬ್ರಿಟನ್‌ನ ನೂತನ ಗೃಹ ಕಾರ್ಯದರ್ಶಿ, ಭಾರತ ಮೂಲದ ಪ್ರೀತಿ ಪಟೇಲ್ ಅವರ ಕುರಿತು ಜನಾಂಗೀಯ ದ್ವೇಷದ ಸಂದೇಶಗಳನ್ನು ಬಿತ್ತರಿಸಿದ್ದ ವ್ಯಕ್ತಿಗೆ 22 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳ ನಡುವೆ ಫೇಸ್‌ಬುಕ್‌ನಲ್ಲಿ ಗೆರಾರ್ಡ್ ಟ್ರಾಯ್ನಾರ್ (53) ಎನ್ನುವ ವ್ಯಕ್ತಿಈ ಸಂದೇಶಗಳನ್ನು ಕಳುಹಿಸಿದ್ದ. ಬಳಿಕ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದ.
ಈ ಬಗ್ಗೆ ಆಘಾತ ವ್ಯಕ್ತಪಡಿಸಿ ಪ್ರೀತಿ ಪಟೇಲ್ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಈ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯದ ನ್ಯಾಯಾಧೀಶ ಸಿಮೋನ್ ಬ್ರಿಯಾನ್, ‘ಇಂತಹ ಕೃತ್ಯಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅಲ್ಲ ಅಥವಾ ರಾಜಕಾರಣಿಗಳು ಪ್ರತಿನಿತ್ಯ ಎದುರಿಸುವ ಟೀಕೆಗಳ ರೀತಿ ಯಲ್ಲಿಯೂ ಇಲ್ಲ. ಬದಲಾಗಿ, ಇಂತಹ ಸಂದೇಶಗಳನ್ನು ಕಳುಹಿಸುವುದೇ ಅಪರಾಧವಾಗಿದೆ ಮತ್ತು ಬೆದರಿಕೆವೊಡ್ಡುವಂತಾಗಿವೆ’ ಎಂದು ಹೇಳಿದ್ದಾರೆ.
**
ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ಮೇಲೆ ಜನಾಂಗೀಯ ದ್ವೇಷದ ಸಂದೇಶಗಳು ಪರಿಣಾಮ ಬೀರಿವೆ
- ಪ್ರೀತಿ ಪಟೇಲ್,ಬ್ರಿಟನ್ ಗೃಹ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.