ವಾಷಿಂಗ್ಟನ್: ಅಮೆರಿಕದಲ್ಲಿನ ಹಿಂದೂ ವಿರೋಧಿ ಧರ್ಮಾಂಧತೆ, ದ್ವೇಷ ಮತ್ತು ಅಸಹಿಷ್ಣುತೆಯನ್ನು ಖಂಡಿಸಿ ಜನಪ್ರತಿನಿಧಿಗಳ ಸಭೆಯಲ್ಲಿ ಭಾರತೀಯ ಮೂಲದ ಸಂಸದ ಥಾನೆದಾರ್ ಬುಧವಾರ ನಿರ್ಣಯವೊಂದನ್ನು ಮಂಡಿಸಿದ್ದಾರೆ.
ಈ ನಿರ್ಣಯವನ್ನು ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಕುರಿತ ಸದನ ಸಮಿತಿಗೆ ವಹಿಸಲಾಗಿದೆ.
‘ಹಿಂದೂಗಳು ಅಮೆರಿಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ, ಹಿಂದೂ ಅಮೆರಿಕನ್ನರು ಶಾಲಾ–ಕಾಲೇಜು ಕ್ಯಾಂಪಸ್‌ಗಳಲ್ಲಿ ಬೆದರಿಕೆಗೆ ಗುರಿಯಾಗುತ್ತಿದ್ದಾರೆ. ತಾರತಮ್ಯ, ದ್ವೇಷದ ಮಾತು ಹಾಗೂ ಪಕ್ಷಪಾತ ಪ್ರೇರಿತ ಅಪರಾಧಗಳಿಗೆ ತುತ್ತಾಗುತ್ತಿದ್ದಾರೆ’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.