ADVERTISEMENT

ಮೋದಿ ಜತೆ ರಚನಾತ್ಮಕ ಚರ್ಚೆ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಪಿಟಿಐ
Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
<div class="paragraphs"><p>ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ಪ್ರಧಾನಿ ನರೇಂದ್ರ ಮೋದಿ &nbsp;</p></div>

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ಪ್ರಧಾನಿ ನರೇಂದ್ರ ಮೋದಿ  

   

–ಪಿಟಿಐ ಚಿತ್ರ

ಲಂಡನ್: ಮುಕ್ತ ವ್ಯಾಪಾರ ಒಪ‍್ಪಂದದ (ಎಫ್‌ಟಿಎ) ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ರಚನಾತ್ಮಕ ಚರ್ಚೆ ನಡೆಸಲಾಗಿದೆ ಎಂದು ಪ್ರಧಾನಿ ರಿಷಿ ಸುನಕ್‌ ಅವರು ಸೋಮವಾರ ಸಂಸತ್‌ಗೆ ಮಾಹಿತಿ ನೀಡಿದ್ದಾರೆ. 

ADVERTISEMENT

ಉಕ್ರೇನ್ ಸಂಘರ್ಷ, ಹವಾಮಾನ ಕ್ರಮ ಮತ್ತು ಭಾರತದೊಂದಿಗಿನ ಸಂಬಂಧ ಬಲಪಡಿಸುವುದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸುವುದು ಸೇರಿದಂತೆ ತಮ್ಮ ಭಾರತ ಭೇಟಿಯ ಮೂರು ಪ್ರಮುಖ ಉದ್ದೇಶಗಳ ಬಗ್ಗೆ ಸುನಕ್ ತಿಳಿಸಿದರು.

‘ರಕ್ಷಣೆ, ತಂತ್ರಜ್ಞಾನ ಮತ್ತು ನಮ್ಮ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಬಲಪಡಿಸುವ ಬಗ್ಗೆ ಮೋದಿ ಅವರೊಂದಿಗೆ ಉತ್ತಮ ಚರ್ಚೆ ನಡೆದಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.