ADVERTISEMENT

ಜೀವವೈವಿಧ್ಯ ಸಮಾವೇಶಕ್ಕೆ ತೆರೆ

ಪಿಟಿಐ
Published 23 ಡಿಸೆಂಬರ್ 2022, 14:02 IST
Last Updated 23 ಡಿಸೆಂಬರ್ 2022, 14:02 IST
ಜೀವವೈವಿಧ್ಯ ಸಂರಕ್ಷಣೆ ಕುರಿತ 15ನೇ ಸಮಾವೇಶ
ಜೀವವೈವಿಧ್ಯ ಸಂರಕ್ಷಣೆ ಕುರಿತ 15ನೇ ಸಮಾವೇಶ   

ಮಾಂಟ್ರಿಯಲ್‌, ಕೆನಡಾ: ಜೀವವೈವಿಧ್ಯ ಸಂರಕ್ಷಣೆ ಕುರಿತ 15ನೇ ಸಮಾವೇಶವು ಮಹತ್ವದ ಒಪ್ಪಂದದೊಂದಿಗೆ ಅಂತ್ಯಗೊಂಡಿತು. ನಾಲ್ಕು ವರ್ಷಗಳ ಮಾತುಕತೆಯ ನಂತರ ನಿಸರ್ಗ ಮತ್ತು ಪರಿಸರ ವ್ಯವಸ್ಥೆಯನ್ನು ಕಾಪಾಡುವ ಐತಿಹಾಸಿಕ ಒಪ್ಪಂದಕ್ಕೆಸುಮಾರು 200 ದೇಶಗಳು ಅನುಮೋದನೆ ನೀಡಿವೆ.

ಒಪ್ಪಂದದ ಭಾಗವಾಗಿ ಜಗತ್ತಿನ ಜೀವವೈವಿಧ್ಯವನ್ನು ರಕ್ಷಿಸಲು ಡಿಜಿಟಲ್‌ ಅನುಕ್ರಮ ಮಾಹಿತಿಯನ್ನು (ಡಿಎಸ್‌ಐ) ಅಳವಡಿಸಿಕೊಳ್ಳಲಾಗಿದೆ. ಇದು ಭಾರತದಂತಹ ದೇಶಗಳಿಗೆ ಪ್ರಕೃತಿ ಸಂರಕ್ಷಣೆಗೆ ಹಣದ ಹರಿವನ್ನು ಖಾತರಿಪಡಿಸಲಿದೆ.

ಭಾರತದ ನಿಯೋಗವು ಸಚಿವ ಭೂಪೇಂದ್ರ ಯಾದವ್‌ ನೇತೃತ್ವವಹಿಸಿತ್ತು.‘ಒಪ್ಪಂದದ ಚೌಕಟ್ಟು ರೂಪಿಸುವ ಮುನ್ನ ಭಾರತ ಸಮಾವೇಶದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ಚರ್ಚಿಸಿತ್ತು’ ಎಂದು ಯಾದವ್‌ ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.