ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಸಮೀಪದಲ್ಲೇ ಮಂಗಳವಾರ ಮುಂಜಾನೆ ಮೂರು ರಾಕೆಟ್‌ಗಳು ಬಿದ್ದಿವೆ.
ಈ ಕುರಿತು ಮಾತನಾಡಿರುವ ಇರಾಕ್ ಪೊಲೀಸರು, ‘ಮೂರು ಕತ್ಯುಷಾ ರಾಕೆಟ್‌ಗಳು ಗ್ರೀನ್ ಜೋನ್‌ಗೆ (ವಿವಿಧ ದೇಶಗಳ ರಾಯಭಾರ ಕಚೇರಿಗಳು, ಸರ್ಕಾರಿ ಕಚೇರಿಗಳೂ ಇರುವ ಪ್ರದೇಶ) ಬಂದು ಬಿದ್ದಿವೆ. ಬಾಗ್ದಾದ್ ಹೊರ ವಲಯದ ಜಫರಾನಿಯಾ ಜಿಲ್ಲೆಯಿಂದ ಈ ಮೂರೂ ರಾಕೆಟ್‌ಗಳನ್ನೂ ಉಡಾಯಿಸಲಾಗಿದೆ. ಮೂರರ ಪೈಕಿ ಎರಡು ರಾಕೆಟ್‌ಗಳು ಅಮೆರಿಕ ರಾಯಭಾರ ಕಚೇರಿಗೆ ಸಮೀಪದಲ್ಲೇ ಬಿದ್ದಿವೆ,’ ಎಂದು ಹೇಳಿದ್ದಾರೆ
ಘಟನೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ಈ ವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇರಾನ್‌ನ ಖುದ್ಸ್ ಪಡೆಯ ಮುಖ್ಯಸ್ಥ ಖಾಸಿಂ ಸುಲೇಮಾನಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟ ನಂತರ ಬಾಗ್ದಾದ್ ಮೇಲೆ ನಡೆದ ಎರಡನೇ ರಾಕೆಟ್ ದಾಳಿ ಇದಾಗಿದೆ. ಇದಕ್ಕೂ ಮೊದಲು ಇರಾಕ್‌ನಲ್ಲಿರುವ ಅಮೆರಿಕ ಸೇನಾ ಪಡೆಗಳ ಮೇಲೆ ಇರಾನ್ ದಾಳಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.