ನವದೆಹಲಿ (ಪಿಟಿಐ): ರೂಪೆ ಕಾರ್ಡ್ ಹೊಂದಿರುವವರು ಇನ್ನು ಮುಂದೆ ನೇಪಾಳದಲ್ಲಿ ಪಾವತಿ ವಹಿವಾಟು ನಡೆಸಬಹುದು. ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ನೇಪಾಳದಲ್ಲಿ ರೂಪೆ ವಹಿವಾಟು ಆರಂಭಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.
ಭೂತಾನ್, ಸಿಂಗಪುರ ಮತ್ತು ಸಂಯುಕ್ತ ಅರಬ್ ಸಂಸ್ಥಾನಗಳಲ್ಲಿ (ಯುಎಇ) ರೂಪೆ ಕಾರ್ಡ್‌ಗೆ ಈಗಾಗಲೇ ಮಾನ್ಯತೆ ಇದೆ. ಈಗ ಈ ಸಾಲಿಗೆ ನೇಪಾಳ ಕೂಡ ಸೇರಿಕೊಂಡಿದೆ. ‘ನೇಪಾಳದಲ್ಲಿ ರೂಪೆ ಕಾರ್ಡ್ ವಹಿವಾಟು ಶುರುವಾಗುತ್ತಿರುವುದು ಭಾರತ ಮತ್ತು ನೇಪಾಳದ ಹಣಕಾಸಿನ ಸಂಬಂಧಕ್ಕೆ ಹೊಸ ಅಧ್ಯಾಯ ಸೇರ್ಪಡೆ ಆದಂತಾಗಿದೆ’ ಎಂದು ಮೋದಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.