ADVERTISEMENT

21 ಡ್ರೋನ್‌, 3 ಕ್ಷಿಪಣಿಗಳಿಂದ ರಷ್ಯಾ ದಾಳಿ: ಉಕ್ರೇನ್

ರಾಯಿಟರ್ಸ್
Published 29 ನವೆಂಬರ್ 2023, 14:38 IST
Last Updated 29 ನವೆಂಬರ್ 2023, 14:38 IST
-
-   

ಮೆಲ್ಬರ್ನ್ : ರಷ್ಯಾ ಪಡೆಗಳು 21 ಡ್ರೋನ್‌ಗಳು ಹಾಗೂ ಮೂರು ಕ್ರೂಸ್‌ ಕ್ಷಿಪಣಿಗಳಿಂದ ದಾಳಿ ನಡೆಸಿವೆ. ಎಲ್ಲ ಡ್ರೋನ್‌ಗಳನ್ನು ಹಾಗೂ ಎರಡು ಕ್ಷಿಪಣಿಗಳನ್ನು ಗುರಿ ತಲುಪುವ ಮೊದಲೇ ನಾಶಪಡಿಸಲಾಯಿತು ಎಂದು ಉಕ್ರೇನ್‌ ವಾಯುಪಡೆ ಬುಧವಾರ ಹೇಳಿದೆ.

ಮೂರನೇ ಕ್ಷಿಪಣಿಯನ್ನು ನಾಶ ಪಡಿಸಿಲ್ಲ. ಆದರೆ, ಅದು ತನ್ನ ನಿಗದಿತ ಗುರಿಯನ್ನು ತಲುಪಲಿಲ್ಲ ಎಂದಿರುವ ವಾಯುಪಡೆ, ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಕ್ಷಿಪಣಿಗಳನ್ನು ದಕ್ಷಿಣ ಭಾಗವಾದ ಮೈಕೋಲೇವ್‌ ವಾಯುಪ್ರದೇಶದಲ್ಲಿಯೇ ಹೊಡೆದುರುಳಿಸಲಾಯಿತು ಎಂದು ವಾಯುಪಡೆ ತಿಳಿಸಿದೆ.

ADVERTISEMENT

ಉಕ್ರೇನ್‌ನ ಪಶ್ಚಿಮ ಭಾಗವನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಇರಾನ್‌ ನಿರ್ಮಿತ ಶಹೀದ್ ಡ್ರೋನ್‌ಗಳಿಂದ ದಾಳಿ ನಡೆಸಿದ್ದವು. ಈ ಪ್ರದೇಶದಲ್ಲಿ ಉಕ್ರೇನ್‌ ಬೃಹತ್‌ ವಾಯು ನೆಲೆಯನ್ನು ಹೊಂದಿದೆ. 

ಈ ದಾಳಿಗಳಿಂದ ಆಗಿರುವ ಹಾನಿ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಅಲ್ಲದೇ, ಉಕ್ರೇನ್‌ನ ಹೇಳಿಕೆಯನ್ನು ತಾನು ದೃಢಪಡಿಸಿಕೊಂಡಿಲ್ಲ ಎಂದು ರಾಯಿಟರ್ಸ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.