ADVERTISEMENT

ರಷ್ಯಾ ಯುದ್ಧನೌಕೆಯ ಎಚ್ಚರಿಕೆ: ಕಾಲ್ಕಿತ್ತ ಅಮೆರಿಕದ 'ಡೆಸ್ಟ್ರಾಯರ್‌'

ರಾಯಿಟರ್ಸ್
Published 24 ನವೆಂಬರ್ 2020, 13:53 IST
Last Updated 24 ನವೆಂಬರ್ 2020, 13:53 IST
ಅಮೆರಿಕದ ಕ್ಷಿಪಣಿ ವಿಧ್ವಂಸಕ- ಮಿಸಲ್‌ ಡೆಸ್ಟ್ರಾಯರ್‌ (ಪ್ರಾತಿನಿಧಿಕ ಚಿತ್ರ-ರಾಯಿಟರ್ಸ್‌)
ಅಮೆರಿಕದ ಕ್ಷಿಪಣಿ ವಿಧ್ವಂಸಕ- ಮಿಸಲ್‌ ಡೆಸ್ಟ್ರಾಯರ್‌ (ಪ್ರಾತಿನಿಧಿಕ ಚಿತ್ರ-ರಾಯಿಟರ್ಸ್‌)   

ಮಾಸ್ಕೊ: ಜಪಾನ್‌ ಸಮುದ್ರದ ರಷ್ಯಾ ಜಲಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ಅಮೆರಿಕದ 'ಯುಎಸ್‌ಎಸ್‌ ಜಾನ್‌ ಎಸ್‌ ಮೆಕೆನ್‌' ಹೆಸರಿನ ಯುದ್ಧ ನೌಕೆಯನ್ನು(ಮಿಸೈಲ್‌ ಡೆಸ್ಟ್ರಾಯರ್‌-ಕ್ಷಿಪಣಿ ವಿಧ್ವಂಸಕ)ಪತ್ತೆ ಮಾಡಿರುವ ರಷ್ಯಾ, ಅದನ್ನು ಅಲ್ಲಿಂದ ಬೇರೆಡೆಗೆ ಅಟ್ಟಿದೆ.

'ನಮ್ಮ ಯುದ್ಧನೌಕೆಯ (ಡೆಸ್ಟ್ರಾಯರ್‌) ಅಡ್ಮಿರಲ್ ವಿನೋಗ್ರಾಡೋವ್, ಅಮೆರಿಕದ ಯುದ್ಧನೌಕೆಗೆ ಮೌಖಿಕ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ತನಗೆ ಸೇರಿದ ಜಲಪ್ರದೇಶದಿಂದ ಜಾಗ ಖಾಲಿ ಮಾಡದೇ ಹೋದರೆ ಓಡಿಸುವುದಾಗಿ ಬೆದರಿಕೆ ಹಾಕಿದ್ದಾರೆ,' ಎಂದು ರಷ್ಯಾ ತಿಳಿಸಿದೆ.

ಎಚ್ಚರಿಕೆ ನೀಡಿದ ನಂತರ ಅಮೆರಿಕದ ಯುದ್ಧನೌಕೆ ತಟಸ್ಥ ಜಲಪ್ರದೇಶಕ್ಕೆ ಧಾವಿಸಿದೆ ಎಂದೂ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಈ ಘಟನೆ ಪೀಟರ್‌ ದಿ ಗ್ರೇಟ್‌ ಗಲ್ಫ್‌ ಪ್ರದೇಶದಲ್ಲಿ ನಡೆದಿದೆ.

'ಅಮೆರಿಕದ ಮಿಸೈಲ್‌ ಡೆಸ್ಟ್ರಾಯರ್‌ ಈ ಪ್ರದೇಶವನ್ನು ತೊರೆದ ನಂತರ ನಮ್ಮ ಜಲಪ್ರದೇಶವನ್ನು ಪ್ರವೇಶಿಸುವ ಪ್ರಯತ್ನಗಳನ್ನು ಮಾಡಿಲ್ಲ. ಆದರೆ ಅಡ್ಮಿರಲ್ ವಿನೋಗ್ರಾಡೋವ್ ಅಮೆರಿಕದ ಯುದ್ಧನೌಕೆ ಮೇಲೆ ನಿಗಾ ಇಟ್ಟಿದ್ದು, 'ಕಾರ್ವೆಟ್' ಹೆಸರಿನ ಮತ್ತೊಂದು ಹಡಗನ್ನು ಜಲಪ್ರದೇಶ ರವಾನಿಸಲಾಗಿದೆ,' ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.