ADVERTISEMENT

ರಷ್ಯಾ–ಚೀನಾ ಜಂಟಿ ಸಮರಾಭ್ಯಾಸ

ಏಜೆನ್ಸೀಸ್
Published 19 ಡಿಸೆಂಬರ್ 2022, 15:37 IST
Last Updated 19 ಡಿಸೆಂಬರ್ 2022, 15:37 IST
ರಷ್ಯಾ–ಚೀನಾ ಸಮರಾಭ್ಯಾಸ (ಸಂಗ್ರಹ ಚಿತ್ರ)
ರಷ್ಯಾ–ಚೀನಾ ಸಮರಾಭ್ಯಾಸ (ಸಂಗ್ರಹ ಚಿತ್ರ)   

ಮಾಸ್ಕೊ:ಅಮೆರಿಕದಿಂದ ಈಗಾಗಲೇ ಬೆದರಿಕೆ ಎದುರಿಸುತ್ತಿರುವ ರಷ್ಯಾ ಮತ್ತು ಚೀನಾ, ಮತ್ತೊಂದು ಸುತ್ತಿನ ಜಂಟಿ ನೌಕಾ ಸಮರಾಭ್ಯಾಸಕ್ಕೆ ಮುಂದಾಗಿದ್ದು, ಪೂರ್ವ ಚೀನಾ ಸಮುದ್ರದಲ್ಲಿ ಬುಧವಾರದಿಂದ ಇದು ಆರಂಭವಾಗಲಿದೆ.

ಈ ಕುರಿತು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದ್ದು, ವರ್ಯಾಗ್‌ ಕ್ಷಿಪಣಿವಾಹಕ ಕ್ರ್ಯೂಸರ್‌, ಮಾರ್ಷಲ್‌ ಶಿಪೋಶ್ನಿಕೊವ್‌ ಡಿಸ್ಟ್ರಾಯರ್‌ ಯುದ್ಧನೌಕೆ ಹಾಗೂ ಪೆಸಿಫಿಕ್‌ ಸಮುದ್ರದಲ್ಲಿ ಗಸ್ತು ತಿರುತ್ತಿರುವ ಎರಡು ಯುದ್ಧನೌಕೆಗಳು ಪಾಲ್ಗೊಳ್ಳಲಿವೆ ಎಂದು ಹೇಳಿದೆ.

ಸಮರಾಭ್ಯಾಸದಲ್ಲಿ ಚೀನಾದಹಲವು ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಸಹ ಪಾಲ್ಗೊಳ್ಳಲಿವೆ. ಜತೆಗೆ ಎರಡೂ ದೇಶಗಳ ಯುದ್ಧ ವಿಮಾನಗಳೂ ಸಾಥ್‌ ನೀಡಲಿವೆ.

ADVERTISEMENT

ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಸೆಪ್ಟೆಂಬರ್‌ ಮತ್ತು ನವೆಂಬರ್ ತಿಂಗಳಲ್ಲಿ ಎರಡೂ ದೇಶಗಳು ಸಮರಾಭ್ಯಾಸ ಮಾಡಿದ್ದವು. ಈ ಮೂಲಕ ಉಕ್ರೇನ್‌ ಮೇಲಿನ ಯುದ್ಧದ ಬಳಿಕವೂ ರಷ್ಯಾದೊಂದಿಗಿನ ತನ್ನ ಬಾಂಧವ್ಯ ಚೆನ್ನಾಗಿಯೇ ಇದೆ ಎಂಬುದನ್ನು ಚೀನಾ ಜಗತ್ತಿಗೆ ತೋರಿಸಿಕೊಟ್ಟಿತ್ತು. ಚೀನಾದ ಈ ನೆರವಿಗೆ ಪ್ರತಿಯಾಗಿ, ತೈವಾನ್‌ನಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ರಷ್ಯಾ ವಿರೋಧಿಸಿದ್ದು, ಚೀನಾವನ್ನು ಬೆಂಬಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.