ಟ್ಯಾಲಿನ್ (ಎಸ್ಟೋನಿಯಾ): ವರ್ಷದ ಹಿಂದೆ ಅತಿಕ್ರಮಿಸಿಕೊಂಡಿರುವ ಉಕ್ರೇನ್‌ನ ವಿವಿಧ ಪ್ರಾಂತ್ಯಗಳಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ರಷ್ಯಾದ ಅಧಿಕಾರಿಗಳು, ಸ್ಥಳೀಯವಾಗಿ ಚುನಾವಣೆ ನಡೆಸಲು ನಿರ್ಧರಿಸಿದ್ದಾರೆ.
ಡೊನೆಟ್ಸ್ಕ್, ಲುಹಾನ್ಸಕ್, ಕೆರ್ಸಾನ್ ಹಾಗೂ ಝಪೊರಿಝಿಯಾ ಪ್ರದೇಶದಲ್ಲಿ ಮತದಾನವು ಶುಕ್ರವಾರ ಆರಂಭವಾಗಿದ್ದು, ಭಾನುವಾರ ಮುಕ್ತಾಯಗೊಳ್ಳಲಿದೆ. ಈ ಪ್ರದೇಶಗಳು ರಷ್ಯಾದ ಸಂಪೂರ್ಣ ಹಿಡಿತಕ್ಕೆ ಇನ್ನೂ ಒಳಪಟ್ಟಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಕೀವ್ ಮತ್ತು ಪಶ್ಚಿಮದ ದೇಶಗಳು ಖಂಡಿಸಿವೆ.
‘ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಇದು. ರಷ್ಯಾ ಇದನ್ನು ನಿರಂತರವಾಗಿ ಕಡೆಗಣಿಸುತ್ತಿದೆ’ ಎಂದು ಮಾನವ ಹಕ್ಕುಗಳ ಪ್ರಮುಖ ಸಂಘಟನೆಗಳಲ್ಲೊಂದಾದ ಕೌನ್ಸಿಲ್ ಆಫ್ ಯುರೋಪ್ ತಿಳಿಸಿದೆ.
‘ಯುದ್ಧ ಪೀಡಿತ ಪ್ರದೇಶದಲ್ಲಿ ಮತದಾನ ನಡೆಸುವುದು ಉಕ್ರೇನ್ ಜನರ ಜೀವವನ್ನು ಅಪಾಯಕ್ಕೆ ಒಡ್ಡಿದೆ’ ಎಂದು ಕೀವ್ ತನ್ನ ಸಂಸತ್‌ನಲ್ಲಿ ಹೇಳಿಕೆ ದಾಖಲಿಸಿದೆ. ಇದನ್ನು ಬೇರೆ ರಾಷ್ಟ್ರಗಳು ಮಾನ್ಯ ಮಾಡಬಾರದು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.