ADVERTISEMENT

ಕೀವ್ ಮೇಲೆ ರಷ್ಯಾದಿಂದ 75 ಡ್ರೋನ್‌ಗಳ ದಾಳಿ

ಪಿಟಿಐ
Published 25 ನವೆಂಬರ್ 2023, 16:04 IST
Last Updated 25 ನವೆಂಬರ್ 2023, 16:04 IST
ಕೀವ್ ನಗರದಲ್ಲಿನ ಶಾಪಿಂಗ್‌ ಮಾಲ್‌ ಮೇಲೆ ರಷ್ಯಾ ಸೇನಾಪಡೆ ಶೆಲ್ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದೆ.– ಎಎಫ್‌ಪಿ ಚಿತ್ರ
ಕೀವ್ ನಗರದಲ್ಲಿನ ಶಾಪಿಂಗ್‌ ಮಾಲ್‌ ಮೇಲೆ ರಷ್ಯಾ ಸೇನಾಪಡೆ ಶೆಲ್ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದೆ.– ಎಎಫ್‌ಪಿ ಚಿತ್ರ   

ಕೀವ್‌, ಉಕ್ರೇನ್‌: ರಷ್ಯಾ ಸೇನೆ ಶನಿವಾರ ಸುದೀರ್ಘ ಅಂತರದ ನಂತರ ಏಕಕಾಲಕ್ಕೆ 75 ಡ್ರೋನ್‌ಗಳಿಂದ ಉಕ್ರೇನ್‌ನ ಮೇಲೆ ದಾಳಿ ನಡೆಸಿದೆ. ಈ ಪೈಕಿ 74 ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಸೇನೆ ತಿಳಿಸಿದೆ. 

ರಷ್ಯಾ ಸೇನೆಯು ದಾಖಲೆ ಸಂಖ್ಯೆಯಲ್ಲಿ ಇರಾನ್‌ ನಿರ್ಮಿತ ಶಾಹೇದ್ ಡ್ರೋನ್‌ ಬಳಸಿ ದಾಳಿ ನಡೆಸಿದೆ. ಇದರ ಪರಿಣಾಮ, ಕೀವ್‌ ನಗರದ ವಿವಿಧೆಡೆ ವಿದ್ಯುತ್‌ ಪೂರೈಕೆ ವ್ಯವಸ್ಥೆ ವ್ಯತ್ಯಯವಾಗಿದೆ ಎಂದು ಸೇನೆ ತಿಳಿಸಿದೆ.

ಕೀವ್‌ನಲ್ಲಿ ಈ ದಾಳಿಯಿಂದಾಗಿ 11 ವರ್ಷದ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ. ಸುಮಾರು 6 ಗಂಟೆ ದಾಳಿ ನಡೆಯಿತು ಎಂದು ಉಕ್ರೇನ್‌ ವಾಯುಪಡೆಯ ಜನರಲ್‌ ಮೈಕೊಲ ಒಲೆಶ್‌ಚುಕ್ ತಿಳಿಸಿದರು.

ADVERTISEMENT

ಡ್ರೋನ್‌ ಉರುಳಿ ಬಿದ್ದ ಸ್ಥಳದಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಂಡಿರುವ ಘಟನೆಗಳು ವರದಿಯಾಗಿವೆ. ಎಂದು ಕೀವ್‌ನ ಮೇಯರ್ ವಿಟಲಿ ಲಿಟ್ಶ್‌ಕೊ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.