ADVERTISEMENT

ರಷ್ಯಾ: ಬೆಂಕಿ ಕಾಣಿಸಿಕೊಂಡಿದ್ದ ಹಡಗಿನಲ್ಲಿ ಓರ್ವ ಸೈನಿಕ ಸಾವು, 27 ಜನರು ನಾಪತ್ತೆ

ಪಿಟಿಐ
Published 23 ಏಪ್ರಿಲ್ 2022, 3:00 IST
Last Updated 23 ಏಪ್ರಿಲ್ 2022, 3:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೋ: ಕಳೆದ ವಾರ ಅಗ್ನಿ ಅವಘಡ ಸಂಭವಿಸಿದ್ದ ರಷ್ಯಾದ ಪ್ರಮುಖ ನೌಕೆ ಮೊಸ್ಕ್ವಾದಲ್ಲಿ ಓರ್ವ ಸೈನಿಕ ಸಾವನ್ನಪ್ಪಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 396 ಮಂದಿಯನ್ನು ರಕ್ಷಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಹಡಗು ಮುಳುಗಿದ ಒಂದು ವಾರದ ನಂತರ ಈ ಹೇಳಿಕೆ ಹೊರಬಿದ್ದಿದೆ.

ಘಟನೆ ನಡೆದ ಸ್ವಲ್ಪ ಸಮಯದಲ್ಲೇ, ಹಡಗಿನ ಎಲ್ಲ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಹಡಗಿನಲ್ಲಿ ಸುಮಾರು 500 ಜನರು ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗಳ ಬಗ್ಗೆ ಸಚಿವಾಲಯ ಯಾವುದೇ ವಿವರಣೆ ನೀಡಿಲ್ಲ.

ADVERTISEMENT

ಈ ಮಧ್ಯೆ, ಕ್ರೂಸರ್‌ ಮೇಲೆ ನಾವೇ ಕ್ಷಿಪಣಿ ದಾಳಿ ನಡೆಸಿದ್ದಾಗಿ ಉಕ್ರೇನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.