ADVERTISEMENT

ರಷ್ಯಾ ಗಂಭೀರ ರಾಜತಾಂತ್ರಿಕತೆಯಲ್ಲಿ ತೊಡಗುವ ಲಕ್ಷಣ ಕಾಣುತ್ತಿಲ್ಲ: ಕಮಲಾ ಹ್ಯಾರಿಸ್

ಏಜೆನ್ಸೀಸ್
Published 12 ಮಾರ್ಚ್ 2022, 5:35 IST
Last Updated 12 ಮಾರ್ಚ್ 2022, 5:35 IST
   

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಜೊತೆಗಿನ ಸಂಘರ್ಷದ ಕುರಿತಂತೆ ‘ಗಂಭೀರ ರಾಜತಾಂತ್ರಿಕತೆಯಲ್ಲಿ ತೊಡಗುವ ಕುರಿತಂತೆ ಯಾವುದೇ ಲಕ್ಷಣ ತೋರಿಸುತ್ತಿಲ್ಲ’ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

‘ಅಮೆರಿಕವು ರಾಜತಾಂತ್ರಿಕತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಆದರೆ, ಪುಟಿನ್ ಅವರು ಗಂಭೀರವಾಗಿತೊಡಗುವ ಯಾವುದೇ ಲಕ್ಷಣವನ್ನು ತೋರಿಸುತ್ತಿಲ್ಲ’ಎಂದು ಹ್ಯಾರಿಸ್ ಹೇಳಿದ್ದಾರೆ.

‘ರಾಜತಾಂತ್ರಿಕತೆಯು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವಾಗಿದೆ. ರಷ್ಯಾವು ಆ ನಿಟ್ಟಿನಲ್ಲಿ ಸಕ್ರಿಯವಾಗಿರಬೇಕು. ನಮ್ಮ ಮಿತ್ರ ರಾಷ್ಟ್ರಗಳು ರಷ್ಯಾದ ನಡವಳಿಕೆಯನ್ನು ಗಮನಿಸಬೇಕು’ಎಂದು ರೊಮೇನಿಯಾದ ಬುಕಾರೆಸ್ಟ್‌ನ ಸುದ್ದಿಗೋಷ್ಠಿಯಲ್ಲಿ ಹ್ಯಾರಿಸ್ ತಿಳಿಸಿದ್ದಾರೆ.

ADVERTISEMENT

ಉಕ್ರೇನ್‌ನ ಬಂದರು ನಗರವಾದ ಮರಿಯುಪೋಲ್‌ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆನಡೆದ ದಾಳಿಯಿಂದಾಗಿ ಮಗು ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದನ್ನು ಉಲ್ಲೇಖಿಸಿದ ಅವರು, ‘ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ಉದ್ದೇಶಪೂರ್ವಕ ದಾಳಿಯು ಯುದ್ಧಾಪರಾಧವಾಗಿದೆ’ ಎಂದು ಹೇಳಿದರು.

ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿನ ಆರೋಗ್ಯ ಸೌಲಭ್ಯಗಳ ಮೇಲೆ 26 ದಾಳಿಗಳು ಮತ್ತು ಕನಿಷ್ಠ 12 ಸಾವುಗಳು ಸಂಭವಿಸಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ಕಲೆಹಾಕಿದೆ.

ಹ್ಯಾರಿಸ್ ಈ ವಾರ ನ್ಯಾಟೊ ಮಿತ್ರರಾಷ್ಟ್ರಗಳಾದ ಪೋಲೆಂಡ್ ಮತ್ತು ರೊಮೇನಿಯಾಗೆ ಭೇಟಿ ನೀಡಿದ್ದು, ಉಕ್ರೇನ್‌ನೊಂದಿಗಿನ ಆಯಾ ಗಡಿಗಳಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ದೇಶಗಳಿಗೆ ಅಮೆರಿಕದ ಬೆಂಬಲ ಸೂಚಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.