ಮೂವರು ಗಗನಯಾತ್ರಿಗಳನ್ನು ಹೊತ್ತು ರಷ್ಯಾದ ಸೊಯುಜ್ ರಾಕೆಟ್ ಸೋಮವಾರ ನಭಕ್ಕೆ ಜಿಗಿದಿದೆ. ಅಕ್ಟೋಬರ್‌ನಲ್ಲಿ ಉಡಾವಣೆಯಾಗಿದ್ದ ರಾಕೆಟ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಯೋಜನೆ ಸ್ಥಗಿತಗೊಳಿಸಲಾಗಿತ್ತು.
ಅಕ್ಟೋಬರ್ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದೇ ಮೊದಲ ಬಾರಿಗೆ ಗಗನಯಾತ್ರಿಗಳನ್ನು ಕಳುಹಿಸಲಾಗಿದೆ. ಸುಯುಜ್ ಎಂಎಸ್–11 ರಾಕೆಟ್ ಕಜಕಿಸ್ತಾನದ ಗಗನನೌಕೆ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಿದೆ. ರಷ್ಯಾದ ಒಲೆಗ್ ಕೊನೊನೆನ್ಕೊ, ನಾಸಾದ ಅನೆ ಮೆಕ್ಲೈನ್ ಹಾಗೂ ಕೆನಡಾದ ಗಗನಯಾತ್ರಿ ಡೇವಿಡ್ ಸೇಂಟ್–ಜಾಕ್ಯೂಸ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಮುಖ ಮಾಡಿದ್ದಾರೆ.
ಅಮೆರಿಕದ ನಾಸಾ ತನ್ನ ಸ್ಪೇಸ್ ಶಟಲ್‌ನ್ನು 2011ರಲ್ಲಿ ಕಾರ್ಯಸ್ಥಗಿತಗೊಳಿಸಿದ ನಂತರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲು ಇರುವ ಏಕೈಕ ನೌಕೆ ಸುಯುಜ್. ಸೇಂಟ್–ಜಾಕ್ಯೂಸ್ 2013ರ ನಂತರದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣ ತಲುಪುತ್ತಿರುವ ಕೆನಡಾದ ಗಗನಯಾತ್ರಿಯಾಗಿದ್ದಾರೆ.
ಅಮೆರಿಕದ ಮೆಕ್ಲೈನ್ ಇರಾಕ್‌ನಲ್ಲಿ ಕಾರ್ಯನಿರ್ಹಹಿಸಿದ್ದು, ಮಹಿಳಾ ರಗ್ಬಿ ಕ್ರೀಡೆಯಲ್ಲಿ ಅಮೆರಿಕ ಪ್ರತಿನಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.