ADVERTISEMENT

ಬೇಹುಗಾರಿಕೆ ಭೀತಿ: ತನ್ನ ಸಂಸತ್ ಬಳಿ ರಷ್ಯಾ ರಾಯಭಾರ ಕಚೇರಿ ತೆರೆಯಲು ಆಸ್ಟ್ರೇಲಿಯಾ ನಕಾರ

ಎಎಫ್‌ಪಿ
Published 26 ಜೂನ್ 2023, 4:39 IST
Last Updated 26 ಜೂನ್ 2023, 4:39 IST
ರಾಯಭಾರಿ ಕಚೇರಿ ತೆರೆಯಲು ಉದ್ದೇಶಿಸಿದ್ದ ಸ್ಥಳದಿಂದ ತೆರಳುತ್ತಿರುವ ರಷ್ಯಾ ರಾಜತಾಂತ್ರಿಕರು
ರಾಯಭಾರಿ ಕಚೇರಿ ತೆರೆಯಲು ಉದ್ದೇಶಿಸಿದ್ದ ಸ್ಥಳದಿಂದ ತೆರಳುತ್ತಿರುವ ರಷ್ಯಾ ರಾಜತಾಂತ್ರಿಕರು   ಎಎಫ್‌ಪಿ ಚಿತ್ರ

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಪಾರ್ಲಿಮೆಂಟ್‌ ಹತ್ತಿರ ಹೊಸದಾಗಿ ರಾಯಭಾರ ಕಚೇರಿ ತೆರೆಯುವ ರಷ್ಯಾದ ಪ್ರಯತ್ನಕ್ಕೆ ಸೋಮವಾರ ಕಾನೂನಾತ್ಮಕ ಹಿನ್ನಡೆಯಾಗಿದೆ. ಜಾಗವನ್ನು ವಶಕ್ಕೆ ಪಡೆಯುವ ಸರ್ಕಾರದ ಕ್ರಮವನ್ನು ಅಲ್ಲಿನ ಕೋರ್ಟ್‌ ಎತ್ತಿಹಿಡಿದಿದೆ.

ಕ್ಯಾನ್‌ಬೆರಾದಲ್ಲಿ ರಷ್ಯಾ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ರಾಯಭಾರ ಕಚೇರಿಯು, ಇಲ್ಲಿನ ಶಾಸಕರ ಮೇಲೆ ಬೇಹುಗಾರಿಕೆ ನಡೆಸಲು ಬಳಕೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಏಜೆನ್ಸಿಗಳು ಎಚ್ಚರಿಸಿದ್ದವು. ಇದರ ಬೆನ್ನಲ್ಲೇ, ಕಚೇರಿ ನಿರ್ಮಾಣ ಯೋಜನೆಯನ್ನು ಆಸ್ಟ್ರೇಲಿಯಾ ಕಳೆದ ವಾರ ನಿರ್ಬಂಧಿಸಿದೆ.

ಜಾಗವನ್ನು ತನ್ನ ವಶದಲ್ಲೇ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ರಷ್ಯಾ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಮುಂದಿನ ವಿಚಾರಣೆ ವರೆಗೆ ನಿವೇಶನ ಖಾಲಿ ಮಾಡಬೇಕು ಎಂದು ಆಸ್ಟ್ರೇಲಿಯಾದ ಉಚ್ಛ ನ್ಯಾಯಾಲಯವು ರಷ್ಯಾಗೆ ನಿರ್ದೇಶನ ನೀಡಿದೆ.

ADVERTISEMENT

'ಸದ್ಯಕ್ಕೆ ಸ್ಥಳದಲ್ಲಿ ಉಳಿಯಲು ಕಾನೂನಾತ್ಮಕವಾದ ಯಾವುದೇ ಆಧಾರ ರಷ್ಯಾ ಬಳಿ ಇಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಷ್ಯಾ ಒಕ್ಕೂಟವು ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನಡೆಯಲಿದೆ ಎಂದು ಭಾವಿಸುತ್ತೇವೆ' ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬೆನೀಸ್‌ ಮಾಧ್ಯಮದವರಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.