ಕೀವ್ (ಉಕ್ರೇನ್): ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಭೇಟಿ ವೇಳೆ ರಷ್ಯಾ ಸೇನೆ ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ನಡೆಸಿದ ದಾಳಿಯಿಂದಾಗಿ 'ರೇಡಿಯೊ ಲಿಬರ್ಟಿ/ರೆಡಿಯೊ ಮುಕ್ತ ಯುರೋಪ್' ನಿರ್ಮಾಪಕಿ ಮೃತಪಟ್ಟಿದ್ದಾರೆ.
'ರೇಡಿಯೊ ಲಿಬರ್ಟಿ ಪತ್ರಕರ್ತೆ ಮತ್ತು ನಿರ್ಮಾಪಕಿ ವೆರ ಗಿರಿಚ್ ಅವರು ಕೀವ್‌ನಲ್ಲಿ ಉಳಿದುಕೊಂಡಿದ್ದ ಮನೆಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದೆ. ಈ ವೇಳೆ ಗಿರಿಚ್ ಮೃತಪಟ್ಟಿದ್ದಾರೆ. ಈ ದಾಳಿ ಏಪ್ರಿಲ್ 28ರಂದು ನಡೆದಿದೆ' ಎಂದು ಯುಎಸ್ ಸ್ಥಾಪಿತ ಸುದ್ದಿ ಸಂಸ್ಥೆಯ (ರೇಡಿಯೊ ಲಿಬರ್ಟಿ) ಉಕ್ರೇನ್ ವಿಭಾಗ ಪ್ರಕಟಿಸಿದೆ.
ಗಿರಿಚ್ ಅವರು ರೇಡಿಯೊ ಲಿಬರ್ಟಿಯ ಕೀವ್ ಬ್ಯೂರೋದಲ್ಲಿ 2018ರಿಂದ ಕೆಲಸ ಮಾಡುತ್ತಿದ್ದರು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗುಟೆರಸ್ ಭೇಟಿ ಸಂದರ್ಭದಲ್ಲಿ ಕೀವ್ ಮೇಲೆ 'ನಿಖರ ದಾಳಿ' ಶಸ್ತ್ರಾಸ್ತ್ರಗಳೊಂದಿಗೆವೈಮಾನಿಕ ದಾಳಿ ನಡೆಸಲಾಗಿದೆ ಎಂಬುದನ್ನು ರಷ್ಯಾದ ರಕ್ಷಣಾ ಸಚಿವಾಲಯವೂ ಖಚಿತಪಡಿಸಿದೆ.
ರಷ್ಯಾ ಸೇನೆ ಫೆಬ್ರುವರಿ 24ರಿಂದ ಉಕ್ರೇನ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲಿಂದೀಚೆಗೆ ಕನಿಷ್ಠ 7 ಜನ ಪತ್ರಕರ್ತರು ಮೃತಪಟ್ಟಿರುವುದಾಗಿ ವರದಿಯಾಗಿವೆ.
ಇವನ್ನೂ ಓದಿ
*ಉಕ್ರೇನ್ ಸಂಘರ್ಷ: ಅಂಟೋನಿಯೊ ಗುಟೆರೆಸ್ ಭೇಟಿ ವೇಳೆ ಕೀವ್ ಮೇಲೆ ರಷ್ಯಾ ದಾಳಿ
*ಉಕ್ರೇನ್ಗೆ ಅಂಟೋನಿಯೊ ಗುಟೆರೆಸ್ ಭೇಟಿ ವೇಳೆ ವೈಮಾನಿಕ ದಾಳಿ ನಿಜ ಎಂದ ರಷ್ಯಾ
*ಉಕ್ರೇನ್ ವಿಚಾರದಲ್ಲಿ ಭಾರತದೊಂದಿಗೆ ಮಾತುಕತೆ ಮುಂದುವರಿದಿದೆ: ಅಮೆರಿಕ
*ಉಕ್ರೇನ್ ಯುದ್ಧದಿಂದ ವಂದೇ ಭಾರತ್ ರೈಲು ಯೋಜನೆಗಳಿಗೆ ಅಡ್ಡಿ: ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.