ಮಾಸ್ಕೊ: ಉಕ್ರೇನ್‌ನಿಂದ ಹಾರಿ ಬಂದ 51 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಅಥವಾ ತಡೆಹಿಡಿಯಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಭಾನುವಾರ ಬೆಳಿಗ್ಗೆ ತಿಳಿಸಿದೆ.
ಆಗ್ನೇಯ ಮಾಸ್ಕೊದಿಂದ 450 ಕಿ.ಮೀ. ದೂರದ ತಂಬೊವ್ ವಲಯದಲ್ಲಿ 18 ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ. ಇನ್ನುಳಿದ 16 ಡ್ರೋನ್‌ಗಳನ್ನು ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೊಡ್, ಒರಿಯೊಲ್ ಹಾಗೂ ಕುರುಸ್ಕ್‌ನಲ್ಲಿ ನಾಶಪಡಿಸಲಾಗಿದೆ ಎಂದು ಸಚಿವಾಲಯ ಟೆಲಿಗ್ರಾಂನಲ್ಲಿ ಹೇಳಿದೆ.
ಡ್ರೋನ್ ದಾಳಿಯಿಂದಾಗಿ ಬೆಲ್ಗೊರೊಡ್‌ನಲ್ಲಿ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವು ಕಾರುಗಳು ಹಾನಿಗೀಡಾಗಿವೆ ಎಂದು ವಲಯದ ಗವರ್ನರ್ ವ್ಯಾಚೆಸ್ಲವ್ ಗ್ಲಡ್‌ಕೋವ್ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.
ಮಿಚುರಿನ್‌ಸ್ಕೈ ಜಿಲ್ಲೆಯಲ್ಲಿ ಬಿದ್ದ ಉಕ್ರೇನ್ ಡ್ರೋನ್‌ನಿಂದ ಯಾರಿಗೂ ಗಾಯವಾಗಿಲ್ಲ, ವಸ್ತುಗಳಿಗೂ ಹಾನಿಯಾಗಿಲ್ಲ ಎಂದು ತಂಬೊಬ್ ಗವರ್ನರ್ ಮ್ಯಾಕ್ಸಿಮ್ ಯೆರ್ಗೊರವ್ ತಿಳಿಸಿದ್ದಾರೆ.
ಧ್ವಂಸ ಮಾಡಿದ ಡ್ರೋನ್‌ಗಳ ಸಂಖ್ಯೆಯನ್ನಷ್ಟೇ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಆದರೆ ಉಕ್ರೇನ್‌ನಿಂದ ಬಂದ ಡ್ರೋನ್‌ಗಳ ಸಂಖ್ಯೆಯನ್ನು ತಿಳಿಸಿಲ್ಲ. ಈ ಬಗ್ಗೆ ಉಕ್ರೇನ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.